ಚೆನ್ನೈ, ಆ.23(Daijiworld News/SS): ಶ್ರೀಲಂಕಾ ಮೂಲಕ ಲಷ್ಕರ್ ಇ ತೊಯ್ಬಾ (ಎಲ್ಇಟಿ) ಸಂಘಟನೆಯ 6 ಉಗ್ರರ ತಂಡ ತಮಿಳುನಾಡು ಪ್ರವೇಶಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕೊಯಮತ್ತೂರು ಜಿಲ್ಲಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಆರು ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಮೂಲದವನಾಗಿದ್ದು, ಉಳಿದ ಐವರು ಶ್ರೀಲಂಕಾ ತಮಿಳಿಯನ್ನರು ಎಂದು ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಾಗೂ ಅಧಿಕಾರವನ್ನು ರದ್ದುಪಡಿಸಿದ ಬಳಿಕ ರಾಷ್ಟ್ರದ ಮೇಲೆ ಉಗ್ರರ ದಾಳಿ ಸೂಚನೆ ಪದೇಪದೆ ಸಿಗುತ್ತಿದ್ದು, ಎಲ್ಲೆಡೆ ಈಗಾಗಲೇ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ ಚೆನ್ನೈನಲ್ಲಿ ಕೂಡ ಗಸ್ತು ತಿರುಗುವ ಪಡೆಗಳನ್ನು ಸೂಕ್ತ ಭದ್ರತಾ ದೃಷ್ಟಿಯಿಂದ ಹೆಚ್ಚಿಸಿದೆ. ಮಾತ್ರವಲ್ಲ, ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.