ಬೆಂಗಳೂರು,ಆ 23 (DaijiworldNews/SM): ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವುದು ಮತ್ತು ರಾಮಮಂದಿರ ನಿರ್ಮಾಣ ಮಾಡಲೆಂದು ಬಿಜೆಪಿ ಪಕ್ಷ ಬೆಳೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಯಾವಾಗ ಎಂಬುವುದು ಪ್ರಶ್ನೆಯಲ್ಲ. ಆದರೆ ಮಂದಿರ ನಿರ್ಮಾಣವಂತು ಖಚಿತ. ಈ ಕಾರ್ಯವನ್ನು ಬಿಜೆಪಿ ಪೂರ್ಣಗೊಳಿಸಲಿದೆ ಎಂದರು.
ದೇಶದ ಮೊದಲನೇ ಪ್ರಧಾನಮಂತ್ರಿ ಮಾಡಿದ ಎಡವಟ್ಟನ್ನು ಹದಿನೆಂಟನೇ ಪ್ರಧಾನಿ ಸರಿಪಡಿಸಿದ್ದಾರೆ. ಮೊದಲ ಪ್ರಧಾನಿ ಯಿಂದಾದ ಹಲವಾರು ತಪ್ಪುಗಳನ್ನು ಸರಿಪಡಿಸುವ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ವಿಶೇಷ ಸ್ಥಾನಮಾನದ 370 ವಿಧಿ ರದ್ದು ಮಾಡುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಸಚಿವಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ಅಧಿಕಾರಿಗಳಿಗೂ ಕೊನೆ ಘಳಿಗೆಯವರಗೆ ಗೊತ್ತಿರಲಿಲ್ಲ. ಸಾಕಷ್ಟು ರಹಸ್ಯವನ್ನು ಕಾಯ್ದುಕೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ, ಅಹಿಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.