ಅಬುದಾಬಿ, ಆ 24 (Daijiworld News/RD): ಅರುಣ್ ಜೇಟ್ಲಿಯವರ ನಿಧನ ತೀವ್ರ ದುಃಖ ತಂದಿದೆ. ಭಾರತದ ಸಂವಿಧಾನ, ಮತ್ತು ಆಡಳಿತದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು. ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು, ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು, ಜನ ಸ್ನೇಹಿ ಕಾನೂನುಗಳನ್ನುರೂಪಿಸಲು ಮತ್ತು ಇತರ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ವಹಿವಾಟು ಹೆಚ್ಚಿಸುವ ವಿವಿಧ ರೀತಿಯ ಯೋಜನೆಗಳಿಗೆ ಅವರ ಕೊಡುಗೆ ಅಪಾರ. ನಾನಿಂದು ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದರು.
ಇಂದು ಮುಂಜಾನೆ ಯುಎಇ ರಾಜಧಾನಿ ಅಬುದಾಬಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಭಾರತ ಮತ್ತು ಅಬುದಾಬಿ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಕೈಗೊಂಡಿದ್ದಾರೆ.