ನವದೆಹಲಿ,ಆ 24 (Daijiworld News/RD) : ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ನವಿಂದು ಒಬ್ಬ ಒಳ್ಳೆಯ ವ್ಯಕ್ತಿಯನ್ನು ಅಗಲಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದರು.
ಅರುಣ್ ಜೇಟ್ಲಿ ಸಾವಿನ ಸುದ್ದಿ ಕೇಳಿ ಬಹಳ ನೋವಾಗಿದೆ. ಜೇಟ್ಲಿ ಬಹಳ ಬುದ್ದಿವಂತರು. ನಾನು ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿದ್ದಾರಾಗಿಂದಲೂ ಸಂಪರ್ಕದಲ್ಲಿದ್ದೆ. ನಿರಂತರವಾಗಿ ಅವರೊಂದಿಗೆ ಚರ್ಚೆ ಮಾಡುತ್ತಿದ್ದೆ. ಜೇಟ್ಲಿ ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಎಬಿವಿಪಿಯಿಂದ ಮೇಲೆ ಬಂದವರು. ವಿಶೇಷವಾಗಿ ಬಿಜೆಪಿ ವಕ್ತಾರರಂತಿದ್ದರು. ಅರುಣ್ ಜೇಟ್ಲಿ ಅವರಿಗೆ ದ್ವೇಷ ಭಾವನೆ ಇರಲಿಲ್ಲ. ಅವರು ಎಂದೂ ದ್ವೇಷದ ರಾಜಕಾರಣ ಮಾಡಲಿಲ್ಲ. ಆರ್ಟಿಕಲ್ 372ಜೆ ಗೆ ಅವರ ಬೆಂಬಲ ಕೇಳಿದ್ದೆ. ಅರುಣ್ ಜೇಟ್ಲಿ ನನ್ನ ಮನವಿಗೆ ಸ್ಪಂದಿಸಿದ್ದರು. ಖರ್ಗೆ ಸಾಬ್ ಆಪ್ ನೇ ಕಮಾಲ್ ಕರ್ ದಿಯಾ ಎಂದಿದ್ದರು.
ನಾನು ಮೊದಲ ಬಾರಿಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ನಾಯಕನಾಗಿ ಮಾತಾನಾಡಿದ್ದಾಗ ಹೇಳಿದ್ದರು. ಅರುಣ್ ಜೇಟ್ಲಿ ಮಾಧ್ಯಮದವರ ಜೊತೆ ಫ್ರೆಂಡ್ಲಿಯಾಗಿರುತ್ತಿದ್ದರು. ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ನನ್ನ ಚಿರಪರಿತ ವ್ಯಕ್ತಿ ಅಗಲಿದ್ದಾರೆ. ಅವರದು ಸಾವಿನ ವಯಸ್ಸಾಗಿರಲಿಲ್ಲ. ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವೆ. ಈ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದರು.