ಬೆಂಗಳೂರು,ಆ 25 (Daijiworld News/RD): ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ರಚನೆಯಾಗಿದ್ದು, ಇದೀಗ ನೂತನ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕೆಂದು ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಅವರು ಸದ್ಯಕ್ಕೆ 15 ಲಕ್ಷದಿಂದ 23 ಲಕ್ಷದ ಇನ್ನೋವಾ ಕಾರನ್ನು ಸಚಿವರುಗಳಿಗೆ ನೀಡಲಾಗಿದ್ದು, ಆದರೆ ನಮಗೆ ಇದರಲ್ಲಿ ಓಡಾಡೋಕೆ ಆಗಲ್ಲ 40-45 ಲಕ್ಷದ ಫಾರ್ಚೂನರ್ ಕಾರೇ ಬೇಕು ಎಂದು ಸಚಿವರುಗಳು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪ್ರವಾಹದಿಂದ ರಾಜ್ಯವೇ ತತ್ತರಿಸಿ ಹೋಗಿದ್ದು, ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಸ್ಥಿತಿ ತಲೆದೋರಿದ್ದು, ಇಂತಹ ಕಂಗೆಟ್ಟ ಪರಿಸ್ಥಿತಿಯನ್ನು
ರಾಜ್ಯ ಎದುರಿಸುತ್ತಿದೆ. ಪ್ರವಾಹ ಪರಿಹಾರ ಕ್ರಮವಾಗಿ ಕೇಂದ್ರದಿಂದ ಯಾವ ಕ್ರಮ ಕೈಗೊಳ್ಳದೆ ಇರುವುದರಿಂದ ಕಂಗೆಟ್ಟಿರುವ ಮುಖ್ಯಮಂತ್ರಿ, ಆದರೆ ಇವುಗಳ ಬಗ್ಗೆ ಅರಿವೇ ಇಲ್ಲದೆ ಸಚಿವರುಗಳು ಶೋಕಿ ಜೀವ ನಡೆಸಲು ಮುಂದಾಗಿದ್ದಾರೆ.
ಈಗಾಗಲೇ ರಾಜ್ಯದ ಜನರು ಮನೆ ಮಠ ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುವ ಈ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದು, ಆದರೆ ಸಚಿವರುಗಳು ದುಬಾರಿ ಕಾರಿಗೆ ಡಿಮ್ಯಾಂಡ್ ಇಟ್ಟಿದ್ದು ಆಕ್ರೋಶಕ್ಕೆ ಗುರಿಯಾಗಿದೆ. ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ, ಅಷ್ಟರಲ್ಲೇ ದುಬಾರಿ ಕಾರು ಬೇಕು ಎಂದು ಹೇಳುವ ಮೂಲಕ ಶೋಕಿ ಶುರು ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.