ಚಿಕ್ಕಮಗಳೂರು,ಆ 25 (Daijiworld News/RD): ಕಾಫಿ ಡೇ ಮಾಲೀಕ ಸಿದ್ದಾರ್ಥ ಮರಣ ಹೊಂದಿದ ತಿಂಗಳ ಒಳಗೆ ತಂದೆ ಗಂಗಯ್ಯ ಹೆಗ್ಡೆ ಇಂದು ವಿಧಿವಶರಾಗಿದ್ದಾರೆ.
96 ವರ್ಷದ ಗಂಗಯ್ಯ ಹೆಗ್ಡೆ, ಕೋಮಾ ಸ್ಥಿತಿಯಲ್ಲಿದ್ದ ಗಂಗಯ್ಯ ಹೆಗ್ಡೆ, ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಮಗ ಸಿದ್ಧಾರ್ಥ್ ಹೆಗಡೆ ಕಳೆದ ತಿಂಗಳು 29ರಂದು ಮಂಗಳೂರಿನಲ್ಲಿ ಉಳ್ಳಾಲ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಆ ಬಳಿಕ ಅವರ ಪತ್ತೆಯಾಗಿತ್ತು. ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಸಾವಿನ ವಿಚಾರವೂ ತಂದೆಗೆ ತಿಳಿದಿರಲಿಲ್ಲ. ಸಿದ್ದಾರ್ಥ ಅವರ ತಂದೆಯ ಅಂತ್ಯಕ್ರಿಯೆ ನಾಳೆ ಚಿಕ್ಕಮಗಳೂರು ಜಿಲ್ಲೆಯ ಚೇತನಹಳ್ಳಿ ಎಸ್ಟೇಟ್ ನಲ್ಲಿ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗಂಗಯ್ಯ ಹೆಗ್ಡೆ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನೆ ಮಾಡಲು ಎಲ್ಲಾ ಸಿದ್ದತೆ ನಡೆಸಲಾಗಿದ್ದು, ಸಿದ್ದಾರ್ಥ್ ಹೆಗಡೆ ಕುಟುಂಸ್ಥರು ಆಸ್ಪತ್ರೆಗೆ ಆಗಮಿಸಿದ್ದು, ಇನ್ನು ಮೈಸೂರಿನಿಂದ ಚಿಕ್ಕಮಗಳೂರಿಗೆ ಅವರ ಪಾರ್ಥಿವ ಶರೀರವನ್ನು ರವಾನಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.