ನವದೆಹಲಿ, ಆ 26 (DaijiworldNews/SM): ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಈಗಾಗಲೇ ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತು. ಆದರೆ, ವಿಚಾರಣೆ ಸಂದರ್ಭದಲ್ಲಿ ಚಿದು ಸಮರ್ಪಕವಾಗಿ ಸ್ಪಂಧಿಸಿಲ್ಲ ಎಂಬ ಕಾರಣದಿಂದ ಮತ್ತೆ ಸಿಬಿಐ ಅಧಿಕಾರಿಗಳು ಚಿದು ಅವರನ್ನು ತಮ್ಮ ವಶಕ್ಕೆ ಕೇಳಿದೆ. ಇದಕ್ಕೆ ಸಿಬಿಐ ವಿಶೇಷ ಕೋರ್ಟ್ ಸಕಾರಾತ್ಮಕ ಸ್ಪಂಧನೆ ನೀಡಿದೆ.
ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಅಧಿಕಾರಿಗಳು ಕೇಳಿದ್ದರು. ಅದರಂತೆ ಆಗಸ್ಟ್ 30ರವರೆಗೆ ಕಸ್ಟಡಿಗೆ ಒಪ್ಪಿಸಿ ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿದೆ. ಕಳೆದ ಬುಧವಾರ ರಾತ್ರಿ ಚಿದಂಬರಂ ನಿವಾಸದಿಂದ ಅವರನ್ನು ಸಿಬಿಐ ಬಂಧಿಸಿತ್ತು. ಆಗಸ್ಟ್ 26 ತನಕ ಸಿಬಿಐ ಅಧಿಕಾರಿಗಳು ಚಿದು ಅವರನ್ನು ತಮ್ಮ ವಶದಲ್ಲಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದರು.
ಆಗಸ್ಟ್ 26ರ ಸೋಮವಾರಕ್ಕೆ ಕಸ್ಟಡಿ ಅವದಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.ಇನ್ನು ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಸಹ ಅರ್ಜಿಯನ್ನು ತಳ್ಳಿಹಾಕಿದೆ.