ಬೆಂಗಳೂರು, ಆ 26 (DaijiworldNews/SM): ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ವಿವಾದಕ್ಕೆ ಕಾರಣವಾಗಿದ್ದ ಖಾತೆ ಹಂಚಿಕೆ ವಿಚಾರಕ್ಕೆ ಕೊನೆಗೂ ಫುಲ್ ಸ್ಟಾಪ್ ಸಿಕ್ಕಿದೆ.
ನೂತನ ಸಚಿವರಿಗೆ ಖಾತೆ ಹಂಚಿಕೆಯನ್ನು ಫೈನಲ್ ಮಾಡಲಾಗಿದ್ದು, ಅಧಿಕೃತ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ.ಗೋವಿಂದ ಕಾರಜೋಳ, ಅಶ್ವಥ್ನಾರಾಯಣ್ ಹಾಗೂ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಲಾಗಿದೆ.
17 ಶಾಸಕರು ಕಳೆದ ವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಖಾತೆ ಹಂಚಿಕೆ ಮಾಡುವ ಕಾರ್ಯವನ್ನು ಹೈಕಮಾಂಡ್ ಮತ್ತು ಯಡಿಯೂರಪ್ಪ ಸೇರಿ ಮಾಡಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಉಂಟಾಗಿದ್ದ ಖಾತೆ ಹಂಚಿಕೆ ವಿವಾದಕ್ಕೆ ತೆರೆ ಎಳೆಯಲಾಗಿದೆ.
ಯಾರಿಗೆ ಯಾವ ಖಾತೆ:
1) ಬಸವರಾಜ ಬೊಮ್ಮಾಯಿ- ಗೃಹ ಖಾತೆ
2) ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
3) ವಿ.ಸೋಮಣ್ಣ- ವಸತಿ ಖಾತೆ
4) ಆರ್.ಅಶೋಕ್- ಕಂದಾಯ ಖಾತೆ
5) ಲಕ್ಷ್ಮಣ ಸವದಿ- ಸಾರಿಗೆ ಖಾತೆ
6) ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
7) ಅಶ್ವಥ್ ನಾರಾಯಣ್ - ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ
8) ಗೋವಿಂದ ಕರಜೋಳ- ಲೋಕೋಪಯೋಗಿ, ಸಮಾಜ ಕಲ್ಯಾಣ
9) ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ
10) ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
11) ಸಿಸಿ ಪಾಟೀಲ್- ಗಣಿ ಮತ್ತು ಭೂವಿಜ್ಞಾನ
12) ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ
13) ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ
14) ಪ್ರಭೂ ಚೌವ್ಹಾಣ್- ಪಶು ಸಂಗೋಪನೆ
15) ಕೋಟಾ ಶ್ರೀನಿವಾಸ ಪೂಜಾರಿ - ಬಂದರು ಮತ್ತು ಮೀನುಗಾರಿಕೆ, ಮುಜರಾಯಿ
16) ಸಿಟಿ.ರವಿ- ಪ್ರವಾಸೊದ್ಯಮ, ಕನ್ನಡ ಮತ್ತು ಸಂಸ್ಕೃತಿ (ಹೆಚ್ಚುವರಿ)
17) ನಾಗೇಶ್- ಅಬಕಾರಿ