ಭೋಪಾಲ್, ಜೂ. 03 (DaijiworldNews/AK): ಮಧ್ಯಪ್ರದೇಶದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ (IMD) 36 ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.

ರಾಜ್ಯದ ಬಹುತೇಕ ನಗರಗಳಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ದಾಖಲಾಗಿದೆ. ಮುಂದಿನ ಕೆಲವು ದಿನಗಳವರೆಗೆ ರಾಜ್ಯದಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯುವ ನಿರೀಕ್ಷೆಯಿದ್ದು, ಇಂದೋರ್ ಮತ್ತು ಉಜ್ಜಯಿನಿ ಸೇರಿದಂತೆ ರಾಜ್ಯದ 36 ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇಂದೋರ್, ಉಜ್ಜಯಿನಿ, ಗ್ವಾಲಿಯರ್, ಶಿಯೋಪುರ್, ಮೊರೆನಾ, ಭಿಂಡ್, ದತಿಯಾ, ಶಿವಪುರಿ, ಗುಣಾ, ಅಶೋಕನಗರ, ನಿವಾರಿ, ಟಿಕಮ್ಗಢ್, ಛತ್ತರ್ಪುರ, ಪನ್ನಾ, ದಿಂಡೋರಿ, ಮಂಡ್ಲಾ, ಬಾಲಾಘಾಟ್, ಸಿಲೋನಿ, ಛಿಂದ್ವಾರಾ, ಪಾಂಡುರ್ನಾ, ನರ್ಮದಾಪುರಂ, ಬೇತುಲ್, ಹರ್ದಾ, ಬುರ್ಹಾನ್ಪುರ, ಖಾಂಡ್ವಾ, ದೇವಾಸ್, ಶಾಜಾಪುರ, ರಾಜ್ಗಢ್, ಖಾರ್ಗೋನೆ, ರತ್ಲಾಮ್, ಝಾಬುವಾ, ಅಲಿರಾಜ್ಪುರ ಮತ್ತು ಬರ್ವಾನಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು, `ಯೆಲ್ಲೋ ಅಲರ್ಟ್’ ಘೋಷಿಸಿದೆ.