ತಮಿಳುನಾಡು, ಆ 29 (Daijiworld News/MSP): ಉಗ್ರರು ತಮಿಳುನಾಡಿಗೆ ನುಸುಳಿರುವ ಮಾಹಿತಿ ದೊರೆತ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳವು ಗುರುವಾರ ಬೆಳಗ್ಗೆ ಕೊಯಮತ್ತೂರು ಸೇರಿದಂತೆ ತಮಿಳುನಾಡಿನ ಐದು ಕಡೆ ದಿಢೀರ್ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ.
ಈ ದಾಳಿ ರಾಷ್ಟ್ರೀಯ ತನಿಖಾ ದಳ ಮತ್ತು ತಮಿಳುನಾಡು ಪೊಲೀಸರು ಜಂಟಿಯಾಗಿ ನಡೆಸಿದ್ದು, ದಾಳಿ ಸಂದರ್ಭ ಶಂಕಿತ ವ್ಯಕ್ತಿಗಳಿಂದ ಸಿಮ್ ಕಾರ್ಡ್ , ಲ್ಯಾಪ್ ಟಾಪ್, ಮೊಬೈಲ್, ಪೆನ್ ಡ್ರೈವ್ ಮತ್ತಿತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದುಕೊಂಡಿದೆ. ಆದರೆ ವಶಪಡಿಸಿಕೊಂಡಿರುವ ವ್ಯಕ್ತಿಗಳ ವಿವರಗಳನ್ನು ಎನ್ಐಎ ಇನ್ನು ಬಹಿರಂಗಪಡಿಸಿಲ್ಲ.
ದಕ್ಷಿಣ ಭಾರತಕ್ಕೆ ಉಗ್ರರು ನುಸುಳಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಎಲ್ಲ ರಾಜ್ಯ ಸರಕಾರಗಳಿಗೂ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿತ್ತು. ಇದೇ ಕಾರಣಕ್ಕಾಗಿ ಕರಾವಳಿ ಪ್ರದೇಶ ಕಾರವಾರ ದಕ್ಷಿಣ ಕನ್ನಡ, ಉಡುಪಿ ಮುಂತಾದ ಕಡೆ ಹೈ ಅಲರ್ಟ್ ಘೋಷಿಸಲಾಗಿದೆ.