ನವದೆಹಲಿ,ಆ 29 (Daijiworld News/RD): ಪಾಕಿಸ್ತಾನಕ್ಕೆ ರಾಹುಲ್ ಗಾಂಧಿಯವರ ಬೆಂಬಲ ನೀಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಈ ಮೊದಲು ಪಾಕ್ ಗೆ ಬೆಂಬಲ ನಿಡುವಂತಹ ಹೇಳಿಕೆ ನೀಡಿರುವುದನ್ನು ಗಮನಿಸಬಹುವುದು. ಈ ಮೂಲಕ ದೇಶದಲ್ಲಿ ಪ್ರತ್ಯೇಕತಾವಾದದ ಬೆಂಕಿ ಹಚ್ಚುತ್ತಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಟೀಕೆಯಿಂದ ಪಾಕಿಸ್ತಾನಕ್ಕೆ ನೆರವಾಗಿತ್ತು. ಈ ಟೀಕೆಯನ್ನು ಗಂಭೀರವಾಗಿ ಪರಿಗಣಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರ ಬರೆದಿತ್ತು. ಈ ರೀತಿ ವಿವಾದ ಸೃಷ್ಟಿಸಿದ ಬಳಿಕ ಅದಕ್ಕೆ ತೇಪೆ ಹಚ್ಚಲು ಮುಂದಾದ ರಾಹುಲ್ ಗಾಂಧಿ, ಕಾಶ್ಮೀರವು ಭಾರತದ ಆಂತರಿಕ ವಿಚಾರ. ಪಾಕಿಸ್ತಾನ ಅಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನವು ತಪ್ಪಾಗಿ ಎಳೆದು ತರುತ್ತಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿತ್ತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಸ್ಮೃತಿ ಇರಾನಿ ಅವರು, ಪಾಕಿಸ್ತಾನಕ್ಕೆ ರಾಹುಲ್ ಗಾಂಧಿಯವರ ಬೆಂಬಲ ನೀಡುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವರು ದೇಶಕ್ಕೊಂದೇ ಧ್ವಜ ಎಂದು ಮಾತನಾಡುವಾಗ ಇಡೀ ದೇಶಕ್ಕೆ ಒಂದು ಸಂವಿಧಾನ, ಎಂದು ಹೇಳುವಾಗ ರಾಹುಲ್ ಗಾಂಧಿಯವರ ಹೇಳಿಕೆಯು ದೇಶವನ್ನು ವಿಭಜಿಸುವತ್ತ ಒಲವು ತೋರುತ್ತಿದೆ. ತಮ್ಮ ದೇಶವನ್ನು ವಿರೋಧಿಸುವ ಮತ್ತು ಶತ್ರು ದೇಶವನ್ನು ಪ್ರೀತಿಸುವ ಒಬ್ಬ ನಾಯಕ ದೇಶದಲ್ಲಿದ್ದರೆ ಅದು ರಾಹುಲ್ ಗಾಂಧಿ ಮಾತ್ರ, ಅವರು ಈ ದೇಶದಲ್ಲಿ ಇರುವುದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದರು. ಜಮ್ಮು, ಕಾಶ್ಮೀರ ಮತ್ತು ಲಡಾಖ್ ನ ಪ್ರಜೆಗಳು ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯನ್ನು ಬಯಸುತ್ತಾರೆ ಹೊರತು ಕಾಂಗ್ರೆಸ್ ನಿಂದ ಅಲ್ಲ ಎಂದು ಹೇಳಿದರು.