ನವದೆಹಲಿ, ಆ.29(Daijiworld News/SS): ಈಡೇರಿಸಲು ಸಾಧ್ಯವಿಲ್ಲದ ಭರವಸೆಗಳನ್ನು, ತಮ್ಮ ವ್ಯಾಪ್ತಿಗೆ ಬಾರದ ವಿಷಯಗಳ ಬಗ್ಗೆ ಭರವಸೆಗಳನ್ನು ನೀಡಬಾರದು ಎಂದು ಸಂಪುಟ ಸಹೋದ್ಯೋಗಿಗಳಲ್ಲಿ ಮೋದಿ ಮನವಿ ಮಾಡಿದ್ದಾರೆ.
ಈ ಹಿಂದೆಯೂ ಸಹ ಪ್ರಧಾನಿ ನರೇಂದ್ರ ಮೋದಿ ಸಚಿವರ ವಿವಾದಾತ್ಮಕ, ಸುದ್ದಿಗೆ ಗ್ರಾಸವಾಗುವ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಚಿವರು ಇತ್ತೀಚಿನ ದಿನಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಗೆ ಬಾರದ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುವುದರ ಬಗ್ಗೆ ಪ್ರಧಾನಿ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಹತ್ವದ ಘೋಷಣೆಗಳನ್ನು ಮಾಡುವುದು ಬೇಡ ಎಂದು ಮೋದಿ ಸಚಿವರುಗಳಲ್ಲಿ ವಿನಂತಿಸಿದ್ದಾರೆ.
ಆರ್ಟಿಕಲ್ 370 ರದ್ದುಗೊಂಡಿರುವುದು ಪ್ರತಿಯೊಂದು ಸಚಿವಾಲಯಕ್ಕೂ ಸಂಬಂಧಪಟ್ಟ ವಿಷಯ. ಅಧಿಕಾರಿಗಳ ಮೂಲಕ ಸಚಿವರುಗಳು ಕಣಿವೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬೇಕು. ಆರ್ಟಿಕಲ್ 370 ರದ್ದತಿ ಹೇಗೆ ಬದಲಾವಣೆ ತರಲಿದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಬೇಕು ಎಂದು ಪ್ರಧಾನಿ ಮೋದಿ ಸಚಿವರುಗಳಿಗೆ ಸಲಹೆ ನೀಡಿದ್ದಾರೆ.