ಶ್ರೀನಗರ,ಆ 29 (Daijiworld News/RD): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ ಮಹತ್ವದ ನಿರ್ಧಾರವನ್ನು ಕೈಗೊಂಡ ಕೇಂದ್ರ ಸರ್ಕಾರ, ಉದ್ಯೋಗ ಸೃಷ್ಟಿಸುವತ್ತಾ ಮುಂದಾಗಿದ್ದು, ಹಾಗಾಗಿ ಮುಂದಿನ 3 ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದು, ಇದರ ಪರಿಹರಿಸುವ ಸಲುವಾಗಿ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿ ಕೊಡುವಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕಣಿವೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್ ತಿಳಿಸಿದರು. ಇನ್ನು 6 ತಿಂಗಳಲ್ಲಿ ಜಮ್ಮು ಕಾಶ್ಮೀರ ಹಾಗೂ ಲಡಾಕ್ ಪ್ರಾಂತ್ಯದಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಪಡಿಸಲಾಗುವುದು. ಆ ಪ್ರಾಂತ್ಯಗಳ ಜನರ ಸಮಗ್ರ ಅಭಿವೃದ್ದಿಗೆ ಮೊದಲ ಆದ್ಯತೆ ನೀಡುವುದು ಕೆಂದ್ರದ ಅಶಯವಾಗಿದೆ. ಜೊತೆಗೆ ಶಾಲಾ ಕಾಲೇಜುಗಳ ಸರ್ವತೋಮುಖವಾಗಿ ಅಬಿವೃದ್ಧಿಪಡಿಸುವುದು ಕೇಂದ್ರದ ಗುರಿಯಾಗಿದೆ.
ಆರ್ಟಿಕಲ್ 370 ವಿದಿಯನ್ನು ರದ್ಧುಗೊಳಿಸಿದ ಬಳಿಕ ಕಣಿವೆ ಪ್ರದೇಶದಲ್ಲಿ ವಿಶೇಷ ಭದ್ರತೆಯನ್ನು ಒದಗಿಸಿದ ಕೇಂದ್ರ ಸರ್ಕಾರ. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ನಿಷೇಧಾಜ್ಷಯನ್ನು ಜಾರಿಗೊಳಿಸಿತ್ತು. ಅ ಬಳಿಕ ಅಲ್ಲಿನ ಸ್ಥಿತಿ ಸುಧಾರಿಸಿದ್ದು, ಈಗ ಕುಪ್ವಾರಾ ಮತ್ತು ಹಂದ್ವಾರಾದಲ್ಲಿ ಪುನಃ ಮೊಬೈಲ್ ಸಂಪರ್ಕವನ್ನು ಕಲ್ಪಿಸಿದೆ. ಇಂಟರ್ನೆಟ್ ಸೇವೆ ಬಂದ್ ಮಾಡಿದ್ದ ಹಲವು ಪ್ರದೇಶಗಳಲ್ಲಿಯೂ ಫೋನ್ ಸಂಪರ್ಕ ತೆರೆಯುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಆರಂಭಿಸುತ್ತೇವೆ ಎಂದು ಮಲ್ಲಿಕ್ ತಿಳಿಸಿದರು. ಈಗಾಗಲೇ ಕಣಿವೆ ರಾಜ್ಯಕ್ಕೆ ಹೇರಿರುವ ನಿರ್ಭಂಧಗಳನ್ನು ಒಂದೊಂದಾಗಿ ಹಿಂಪಡೆದುಕೊಂಡು ಬರುತ್ತಿದೆ.