ನವದೆಹಲಿ,ಆ 29 (Daijiworld News/RD): ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಗೆ ಬಂದು ಕಾಶ್ಮೀರದ ಸಹೋದರರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟ್ ಶಾಹಿದ್ ಅಫ್ರಿದಿ ಟ್ವೀಟ್ ಗೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಖಡಕ್ ರೀ ಟ್ವೀಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತ ಸರಕಾರ ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪ್ರತಿ ವಾರ ಎಲ್ಒಸಿಯಲ್ಲಿ 30 ನಿಮಿಷಗಳ ಕಾರ್ಯಕ್ರಮ ನಡೆಸುವುದಾಗಿ ಹೇಳಿದ್ದಾರೆ. ಇದನ್ನು ಉಳಿದವರೂ ಪಾಲಿಸುತ್ತಿದ್ದು, ಕಾಶ್ಮೀರದ ಸಹೋದರರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು. ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಮಂಗಳವಾರ ತಾವೂ ಎಲ್ಒಸಿಗೆ ಭೇಟಿ ಕೊಡುವುದಾಗಿ ಎಂದು ಟ್ವೀಟ್ ಮಾಡಿದ ಮಾಜಿ ಕ್ರಿಕೆಟ್ ಶಾಹಿದ್ ಅಫ್ರಿದಿ.
ಶಾಹಿದ್ ಆಫ್ರಿದಿ ನ ಈ ಟ್ವೀಟ್ ಗೆ ರೀ ಟ್ವೀಟ್ ಮಾಡಿರುವ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಆಫ್ರಿದಿ ಫೋಟೋ ಟ್ವೀಟ್ ಮಾಡಿ, ಈ ಚಿತ್ರದಲ್ಲಿ ಶಾಹಿದ್ ಆಫ್ರಿದಿ ಮುಜುಗರಕ್ಕೊಳಗಾಗುವುದಕ್ಕೆ ಏನು ಮಾಡಬೇಕು ಎಂದು ಶಾಹಿದ್ ರನ್ನೇ ಕೇಳುತ್ತಿದ್ದಾನೆ. ಇದರಿಂದ ಶಾಹಿದ್ ಪ್ರಬುದ್ಧನಾಗಲು ನಿರಾಕರಿಸಿದ್ದಾನೆ ಎಂಬುದರ ಬಗ್ಗೆ ನನಗಿದ್ದ ಅನುಮಾನಗಳು ಖಚಿತವಾಗಿವೆ. ಆತ ಪ್ರಬುದ್ಧನಾಗಲು ಆನ್ ಲೈನ್ ಶಿಶು ವಿಹಾರದ ಟ್ಯುಟೋರಿಯಲ್ ಗೆ ಸೇರಿಕೊಳ್ಳುವಂತೆ ಆದೇಶಿಸುತ್ತೇನೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.