ನವದೆಹಲಿ, (Daijiworld News/MSP): ವಿಶ್ವದ ಅತಿ ವೇಗದ ಆರ್ಥಿಕತೆ ಎಂಬ ಹಣೆಪಟ್ಟಿ ಕಳೆದುಕೊಂಡಿರುವ ಭಾರತವನ್ನು ಮತ್ತೆ ಅಭಿವೃದ್ಧಿ ವೇಗದಲ್ಲಿ ಕೊಂಡೊಯ್ಯಲು, ನಿಧಾನಗತಿಯಲ್ಲಿರುವ ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಮಹತ್ವದ ನಿರ್ಧಾರಗಳನ್ನು ಶುಕ್ರವಾರ ಘೋಷಿಸಿದ್ದಾರೆ.
ಪ್ರಮುಖವಾಗಿ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ , ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ವಿಲೀನ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗುವ ಬಗ್ಗೆ ಘೋಷಿಸಿದ್ದಾರೆ.
ಇದೆಲ್ಲಕ್ಕಿಂತಲೂ ಪ್ರಮುಖವಾಗಿ ನೀರವ್ ಮೋದಿಯಂತಹವರ ವಂಚನೆ ತಡೆಯಲು ಎಸ್ ಡಬ್ಲ್ಯುಐಎಫ್ ಟಿ ಸಂದೇಶವನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಲಿಂಕ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.