ನವದೆಹಲಿ, ಆ 30 (DaijiworldNews/SM): ಡಿಕೆ ಶಿವಕುಮಾರ್ ಅವರ ದೆಹಲಿಯ ನಿವಾಸದಲ್ಲಿ ದೊರೆತಿದ್ದ ಎಂಟು ಕೋಟಿ ರೂಪಾಯಿ ಅಕ್ರಮ ಹಣದ ಬಗ್ಗೆ ತನಿಖೆ ತೀವ್ರಗೊಂಡಿದೆ. ಇದೀಗ ಮಾಜಿ ಸಚಿವ ಡಿಕೆಶಿಗೆ ಇಡಿ ಸಂಕಷ್ಟ ಶುರುವಾಗಿದೆ. ಇಡಿ ಸಮನ್ಸ್ ರದ್ದು ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ.
ಶುಕ್ರವಾರ ಸಂಜೆ 6.30ರ ವೇಳೆಯಿಂದ ಇಡಿ ಅಧಿಕಾರಿಗಳು ಡಿಕೆಶಿಯವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಒಂದೊಮ್ಮೆ ವಿಚಾರಣೆ ವೇಳೆ ಡಿಕೆಶಿ ನೀಡಿದ ಉತ್ತರ ಇಡಿ ಅಧಿಕಾರಿಗಳಿಗೆ ಸಮಧಾನ ನೀಡದಿದ್ದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.
ಇಡಿ, ಸಿಬಿಐ ಅಧಿಕಾರಿಗಳು ನೀಡಿರುವ ಎರಡನೇ ಸಮನ್ಸ್ ಗೆ ಸ್ಪಂಧಿಸಿರುವ ಡಿಕೆಶಿ ವಿಚಾರಣೆಗೆ ಹಾಜರಾಗಿದೆ. ಲೋಕನಾಯಕ ಭವನದ ೬ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ. 6 ಮಂದಿ ಅಧಿಕಾರಿಗಳು ಶಿವಕುಮಾರ್ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಶಿವಕುಮಾರ್ ಪರ ಮೂವರು ವಕೀಲರು ವಾದ ಮಂಡಿಸುತ್ತಿದ್ದಾರೆ.