ಹೊಸದಿಲ್ಲಿ, ಆ.31(Daijiworld News/SS): ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ಅವರು ಸೆಪ್ಟೆಂಬರ್ನಲ್ಲಿ ನಿವೃತ್ತರಾಗಲಿದ್ದಾರೆ.
ಉತ್ತರ ಪ್ರದೇಶದ ಕೇಡರ್ನ 1967 ಬ್ಯಾಚ್ನ ನಿವೃತ್ತ ಐಎಎಸ್ ಅಧಿಕಾರಿ, ನೃಪ್ರೇಂದ್ರ ಮಿಶ್ರಾ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಟೆಲಿಕಾಂ ನಿಯಂತ್ರಕ ಪ್ರಾಧಿಕಾರದ ಅಧ್ಯಕ್ಷರು, ಮತ್ತು ಭಾರತ ಸರ್ಕಾರದ ರಸಗೊಬ್ಬರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ನೃಪೇಂದ್ರ ಮಿಶ್ರಾ ಅವರ ನಿವೃತ್ತಿ ಕುರಿತು ಟ್ವೀಟ್ ಮಾಡಿರುವ ಮೋದಿ, ನೃಪೇಂದ್ರ ಮಿಶ್ರಾ ಅವರು ಅತ್ಯುತ್ತಮ ಅಧಿಕಾರಿ. ಸಾರ್ವಜನಿಕ ನೀತಿ ಮತ್ತು ಆಡಳಿತ ಬಗ್ಗೆ ಹೆಚ್ಚಿನ ಗ್ರಹಿಕೆ ಹೊಂದಿದ್ದಾರೆ. 2014ಲ್ಲಿ ಹೊಸದಿಲ್ಲಿಗೆ ನಾನು ಬಂದಾಗ ಬಹಳಷ್ಟು ಕಲಿಸಿದರು. ನನಗೆ ಮಾರ್ಗದರ್ಶಕರಾಗಿದ್ದರು. ಸೆಪ್ಟೆಂಬರ್ ಎರಡನೇ ವಾರದಲ್ಲಿ ಮಿಶ್ರಾ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗುವುದು. ಅವರ ಮುಂದಿನ ಜೀವನ ಸುಖಕರವಾಗಿರಲಿ, ಆರೋಗ್ಯಕರವಾಗಿರಲಿ ಎಂದು ಹೇಳಿದ್ದಾರೆ.
ನೃಪೇಂದ್ರ ಮಿಶ್ರಾ ನಿವೃತ್ತಿ ನಂತರ ಅವರ ಜಾಗಕ್ಕೆ ಪಿಕೆ ಸಿನ್ಹಾ ಅವರನ್ನು ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.