ಮುಂಬೈ,ಆ31(DaijiworldNews/MSP): ನೋಟು ರದ್ದುಪಡಿಸಿದರೂ ನಕಲಿ ನೋಟುಗಳ ಚಲಾವಣೆ ಕಡಿಮೆಯಾಗಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗುರುವಾರ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
2018-19ರ ಅವಧಿಯಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪತ್ತೆಯಾದ ಒಟ್ಟು ನಕಲಿ ಭಾರತೀಯ ಕರೆನ್ಸಿ 5.6% ರಿಸರ್ವ್ ಬ್ಯಾಂಕಿನಲ್ಲಿ ಮತ್ತು 94.4% ಇತರ ಬ್ಯಾಂಕುಗಳಿಂದ ಪತ್ತೆಯಾಗಿದೆ ಎಂದು ಕೇಂದ್ರ ಬ್ಯಾಂಕಿನ ವಾರ್ಷಿಕ ವರದಿ 2019 ತಿಳಿಸಿದೆ.
ಆರ್ಬಿಐ ಅಂಕಿ - ಅಂಶಗಳ ಪ್ರಕಾರ 2016 ರ ನೋಟು ರದ್ದುಪಡಿಸಿದ ನಂತರ ನೀಡಲಾದ 200, 500 ಮತ್ತು 2000 ರೂ ನೋಟುಗಳ ನಕಲಿ ನೋಟುಗಳು ವ್ಯಾಪಕವಾಗಿ ಹರಡಿವೆ ಎಂದು ಹೇಳಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ರೂ.10 ರೂ 20 ಮತ್ತು ರೂ 50 ರ ಪಂಗಡಗಳಲ್ಲಿ ಪತ್ತೆಯಾದ ನಕಲಿ ನೋಟುಗಳಲ್ಲಿ 20.2%, 87.2% ಮತ್ತು 57.3% ಹೆಚ್ಚಳ ಕಂಡುಬಂದಿದೆ. ಇನ್ನು 500 ರೂ.ಗಳ ಮೌಲ್ಯದ ನಕಲಿ ನೋಟುಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತ 121% ಹೆಚ್ಚಾಗಿದೆ. ರೂ. 2,000 ದಲ್ಲಿ, 2018-19ರ ಅವಧಿಯಲ್ಲಿ ಅದು 21.9% ರಷ್ಟುಹೆಚ್ಚಾಗಿದೆ. 100 ರೂಗಳ ನಕಲಿ ನೋಟುಗಳು 7.5% ರಷ್ಟು ಕಡಿಮೆಯಾಗಿದೆ.
ನೋಟುಗಳ ಮುದ್ರತಾ ಮುದ್ರಣಕ್ಕಾಗಿ 2018 ರ ಜುಲೈ 1 ರಿಂದ 2019 ರ ಜೂನ್ 30 ರವರೆಗೆ ಒಟ್ಟು ಖರ್ಚು ₹ 4,811 ಕೋಟಿಯಾಗಿದ್ದು, ಹಿಂದಿನ ವರ್ಷದಲ್ಲಿ, 9 4,912 ಕೋಟಿಯಾಗಿತ್ತು.