ಬೆಂಗಳೂರು,ಸೆ 1 (Daijiworld News/RD): ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ, ಬೇಕಾಬಿಟ್ಟಿ ಸಂಚರಿಸುವ ವಾಹನ ಸವಾರರಿಗೆ, ಮೋಟಾರು ವಾಹನ ತಿದ್ದುಪಡಿ ಕಾಯ್ದೆ ದೇಶಾದ್ಯಂತ ಇಂದಿನಿಂದ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆಗೊಳಿಸಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಈ ನಿಯಮ ಜಾರಿಯಾಗಲಿದೆ.
ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ,
ಕುಡಿದು ವಾಹನ ಚಲಾಯಿಸುವವರಿಗೆ - 10,000 ರೂ ದಂಡ, ಪುನಾರಾವರ್ತಿಸಿದರೆ 15,000 ರೂ ಮತ್ತು 2 ವರ್ಷ ಜೈಲು ಶಿಕ್ಷೆ.
ಡ್ರೈವಿಂಗ್ ಲೈಸನ್ಸ್ ಇಲ್ಲದಿದ್ರೆ - 5,000 ರೂ ದಂಡ
ಆಂಬುಲೆನ್ಸ್ ಗೆ ದಾರಿ ಮಾಡಿಕೊಡದಿದ್ದರೆ- 10,000 ರೂ ದಂಡ.
ಅತೀ ವೇಗದ ಚಾಲನೆ- 1,000 ದಂಡ, ದೊಡ್ಡ ವಾಹನಗಳಿಗೆ 2000 ದಂಡ.
ಪರ್ಮಿಟ್ ಇಲ್ಲದಿದ್ದರೆ - 10,000 ದಂಡ.
ಓವರ್ ಲೋಡಿಂಗ್ ಇದ್ದರೆ - 20,000 ರೂ ದಂಡ ಪ್ರತೀ ಟನ್ ಗೆ 2,000 ದಂಡ.
ಪ್ರಯಾಣಿಕರ ಓವರ್ ಲೋಡಿಂಗ್ - 1,000 ರೂ ದಂಡ.
ದ್ವಿ ಚಕ್ರ ವಾಹನದಲ್ಲಿ ಓವರ್ ಲೋಡಿಂಗ್ - 2,000 ಹಾಗೂ 3 ತಿಂಗಳು ಡ್ರೈವಿಂಗ್ ಲೈಸನ್ಸ್ ರದ್ದು.
ವಿಮೆ ಇಲ್ಲದಿದ್ದರೆ - 2,000 ರೂ ದಂಡ.
ರೇಸಿಂಗ್ ಮಾಡಿದರೆ - 5,000 ರೂ ದಂಡ.
ಸೀಟ್ ಬೆಲ್ಟ್ ಹೆಲ್ಮೆಟ್ ಇಲ್ಲದಿದ್ದರೆ - 1,000 ರೂ ದಂಡ ಮತ್ತು 3 ತಿಂಗಳು ಡ್ರೈವಿಂಗ್ ಲೈಸನ್ಸ್ ರದ್ದು.
ಇವತ್ತಿನಿಂದ ಈ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದ್ದು, ಟ್ರಾಫಿಕ್ ನಿಯಮವನ್ನು ಪಾಲಿಸಿ ಎಚ್ಚರಿಕೆಯಿಂದ ವಾಹನ ಸವಾರರು ಸಂಚರಿಸಬೇಕಾಗಿದೆ.