ನವದೆಹಲಿ,ಸೆ 1 (Daijiworld News/RD): ದೇಶದ ಜಿಡಿಪಿ ಶೇ. 5ಕ್ಕೆ ಕುಸಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ದೇಶದ ಆರ್ಥಿಕ ಕುಸಿತಕ್ಕೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೊಳಿಸಿದ ಕೆಟ್ಟ ಆರ್ಥಿಕ ನೀತಿಯೇ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಅವರು , ದೇಶದ ಆರ್ಥೀಕವಾಗಿ ಪ್ರಗತಿ ಕಾಣದೆ ಕುಸಿಯುತ್ತಿದ್ದು ಮೋದಿ ಸರ್ಕಾರದ ಸರ್ವಾಂಗೀಣ ಕಳಪೆ ನಿರ್ವಹಣೆಯೇ ಕಾರಣವಾಗಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜಕೀಯ ಹಗೆತನ ಸಾಧಿಸುವ ಉದ್ದೇಶವನ್ನು ಬದಿಗಿಟ್ಟು, ಆರ್ಥಿಕವಾಗಿ ಸುಸ್ಥಿರ ಅಭಿವೃದ್ಧಿಯೆಡೆಗೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.
ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆ ಶುಕ್ರವಾರ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ಉತ್ಪಾದನಾ ವಲಯದ ಒಟ್ಟಾರೆ ಮೌಲ್ಯ ಸೇರ್ಪಡೆ (ಜಿವಿಎ) ಶೇ.12.1ರಿಂದ ಶೇ.0.6ಕ್ಕೆ ಕುಸಿದಿದೆ. ಇದೇ ರೀತಿ ಕೃಷಿ ವಲಯದ ಜಿವಿಎ ಶೇ.5.1ರಿಂದ ಶೇ.2ಕ್ಕೆ ಇಳಿದಿದೆ. 7 ವರ್ಷಗಳಲ್ಲೇ ಭಾರತದ ಜಿಡಿಪಿ ಕನಿಷ್ಠ ಮಟ್ಟಕ್ಕೆ (ಶೇ. 5) ಇಳಿಕೆಯಾಗಿದೆ. ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಮನಮೋಹನ್ ಸಿಂಗ್, ಉತ್ಪಾದನಾ ವಲಯದ ಬೆಳವಣಿಗೆ ಶೇ. 0.6ಕ್ಕೆ ಇಳಿದಿದೆ. ಪ್ರಧಾನಿ ಮೋದಿ ಸರ್ಕಾರ ಕಳೆದ ಅವಧಿಯಲ್ಲಿ ಮಾಡಿದ ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಜಾರಿ ನಿರ್ಧಾರದಿಂದ ನಮ್ಮ ದೇಶದ ಆರ್ಥಿಕತೆ ಇನ್ನೂ ಸುಧಾರಿಸಿಕೊಂಡಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಪಿಎಂ ಮನಮೋಹನ್ ಸಿಂಗ್ ಈ ಹಿಂದೆ ಬಿಜೆಪಿ ಸರ್ಕಾರ ನೋಟು ಅಮಾನ್ಯೀಕರಣ ಘೋಷಿಸಿದಾಗ ಅದರಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎಂದು ಹೇಳಿದ್ದರು. ದೇಶದ ಅತ್ಯುತ್ತಮ ಆರ್ಥಿಕ ತಜ್ಞರಲ್ಲಿ ಒಬ್ಬರಾಗಿರುವ ಮನಮೋಹನ್ ಸಿಂಗ್, ದೇಶದ ಜಿಡಿಪಿ ಶೇ. 5ಕ್ಕೆ ಕುಸಿದಿದೆ. ಈ ಬಗ್ಗೆ ಅವರು ವಿಡಿಯೋ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.