ಹುಬ್ಬಳ್ಳಿ,ಸೆ 1 (Daijiworld News/RD): ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಒಳಗೊಳಗೆ ಕಿತ್ತಾಟ ನಡೆಸುತ್ತಿದ್ದಾರೆ, ಇಷ್ಟೆದ್ದರು ತಾನು ಡಿಕೆಶಿಗೆ ಬೆಂಬಲಕ್ಕೆ ನಿಂತಂತೆ ನಾಟಕವಾಡುತ್ತಿದ್ದು, ದೋಸ್ತ ಸರ್ಕಾರ ಪತನವಾಗುವುದಕ್ಕೆ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದೇ ಸಿದ್ದರಾಮಯ್ಯ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಡೆಯುತ್ತಿದ್ದು, ಅವರು ಯಾವ ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆಯಿಲ್ಲ. ಕಪ್ಪು ಹಣ ಸಂಗ್ರಹ ಮಾಡಿಲ್ಲದಿದ್ದರೆ ಇಡಿ ವಿಚಾರಣೆಗೆ ಸಹಕರಿಸಲಿ. ರಾಜಕೀಯ ದ್ವೇಷದಿಂದ ಇಡಿ ದಾಳಿ ನಡೆದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನವರು ಬಿಜೆಪಿ ಬಗ್ಗೆ ಚಿಂತೆ ಮಾಡುವುದು ಬೇಡ ಎಂದು ಹೇಳಿದರು.
ಮುಖ್ಯಮಂತ್ರಿ, ಪಕ್ಷ ಬಲವರ್ಧನೆ, ಆಡಳಿತಾತ್ಮಕ ಅನುಕೂಲತೆಗೆ ಮೂವರನ್ನು ಡಿಸಿಎಮ್ ಮಾಡಲಾಗಿದೆ. ಹಾಗಾಗಿ ಇದರ ಬಗ್ಗೆ ಸುಳ್ಳು ಆರೋಪ ಹೊರಿಸುವುದು ಬೇಡ ಎಂದರು. ಇದುವರೆಗೂ ವಿರೋಧ ಪಕ್ಷದ ನಾಯಕನಾಗಲು ಅವರಿಗೆ ಸಾಧ್ಯವಾಗಿಲ್ಲ, ಮೊದಲು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ಥಾನಮಾನ ಯಾವುದೆಂದು ಅವರು ಚಿಂತಿಸಲಿ. ಕುಣಿಯಲಾರದವಳು ನೆಲ ಡೊಂಕು ಎಂದಳಂತೆ ಹೇಳಿಕೆ ವಿಚಾರವು ಸಿದ್ದರಾಮಯ್ಯ ಮಾತು ಅವರ ಸಂಸ್ಕೃತಿ ತೋರಿಸುತ್ತೆ ಎಂದರು.