ಮುಂಬೈ, ಜೂ. 17 (DaijiworldNews/AA): ಉದ್ಧವ್ ಬಣದ ಸಂಸದರನ್ನ ಖರೀದಿಸಲು ಪ್ರತಿಯೊಬ್ಬರಿಗೂ 50 ಕೋಟಿ ರೂ. ಹಣ ಆಫರ್ ನೀಡಲಾಗಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ.

"15 ಕೋಟಿ ಮುಂಗಡ ಹಣ ನೀಡಲಾಗಿದೆ. ಸಂಸದರನ್ನ ದೆಹಲಿಗೆ ಕರೆದೊಯ್ಯಲು ಖಾಸಗಿ ಜೆಟ್ಗಳನ್ನ ಕಳುಹಿಸಲಾಗುತ್ತಿದೆ. ಮಂಗಳವಾರ ನಾಂದೇಡ್ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ಮೂರು ಸ್ಥಳಗಳಿಗೆ ಮೂರು ಖಾಸಗಿ ಜೆಟ್ಗಳನ್ನ ಕಳುಹಿಸಲಾಗಿದೆ" ಎಂದು ತಿಳಿಸಿದ್ದಾರೆ.
"2022ರಲ್ಲಿ ನಡೆದಂತೆ ಪಕ್ಷದಲ್ಲಿ ವಿಭಜನೆಯನ್ನು ಪುನರಾವರ್ತಿಸಲು ಯಾವುದೇ ಪ್ರಯತ್ನಗಳು ನಡೆದರೆ, ಮಹಾರಾಷ್ಟ್ರದ ಜನರು ಮತ್ತು ಸೇನಾ (ಯುಬಿಟಿ) ಕಾರ್ಯಕರ್ತರು ಬಂಡಾಯ ಸಂಸದರನ್ನು ಬಿಡುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.