ಬೆಂಗಳೂರು, ಜೂ. 19 (DaijiworldNews/AK): ಶವರ್ಮಾ, ಕಬಾಬ್ ಪ್ರಿಯರಿಗೆ ಶಾಕ್ ಕೊಟ್ಟ ಆಹಾರ ಸುರಕ್ಷತಾ ಇಲಾಖೆ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ.

ಬೆಂಗಳೂರಿನ 39 ಕಡೆ ಶವರ್ಮಾ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಅದರಲ್ಲಿ 32 ಸ್ಯಾಂಪಲ್ನ್ನ ಲ್ಯಾಬ್ಗೆ ರವಾನೆ ಮಾಡಲಾಗಿತ್ತು. ಇದರಲ್ಲಿ 24 ಕಡೆ ಸುರಕ್ಷಿತ, 8 ಕಡೆ ಅಸುರಕ್ಷಿತ ಅಂತಾ ವರದಿ ಮಾಡಿದೆ. ಬಣ್ಣ ಬೆರೆಸಿ ಶವರ್ಮಾ ತಯಾರು ಮಾಡಿರೋದು ಬೆಳಕಿಗೆ ಬಂದಿದೆ.
ಬೆಂಗಳೂರಿನ 16 ಕಡೆ ಕಬಾಬ್ ಸ್ಯಾಂಪಲ್ ಕಲೆಕ್ಷನ್ ಮಾಡಿದ್ದು, ಇದರಲ್ಲಿ 14 ಕಡೆ ಸೇಫ್, 2 ಕಡೆ ಅನ್ ಸೇಫ್ ಅಂತಾ ವರದಿ ಬಂದಿದೆ. ಕಬಾಬ್ಗೆ ಕಲರ್ ಹಾಕಬಾರದು ಅಂತಾ ಆದೇಶವಿದ್ದರು, ಕಲರ್ ಬೆರಕೆ ಮಾಡ್ತಾ ಇರೋದು ಪತ್ತೆಯಾಗಿದೆ. ಕೆಲ ತಿಂಗಳ ಹಿಂದೆ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿದ್ದ ಸರ್ಕಾರ, ಕಬಾಬ್ ಹಾಗೂ ಶವರ್ಮಾಗಳ ಮೇಲೆಯೂ ತನ್ನ ನಿಗಾ ಇಟ್ಟಿತ್ತು. ಇದೀಗ ಕಾನ್ಸರ್ ಕಾರಕ ಅಂಶ ಇರುವುದು ಕಂಡು ಬಂದಿದೆ.