ನವದೆಹಲಿ, ಸೆ 03 (Daijiworld News/MSP): ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ನ ಮತ್ತೊಂದು ಹಂತ ಕೂಡ ಯಶಸ್ವಿಯಾಗಿದೆ.
ಹೀಗಾಗಿ ಚಂದ್ರನಿಗೆ ಗಗನ ನೌಕೆ ಮತ್ತಷ್ಟು ಹತ್ತಿರವಾಗಲಿದೆ. ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಪ್ರಕ್ರಿಯೆಯನ್ನು ವಿಜ್ಞಾನಿಗಳು ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಂದರೆ ಮೊದಲ ಬಾರಿಗೆ ತನ್ನ ಕಕ್ಷೆಯಲ್ಲಿ ಸುತ್ತುವಿಕೆಯನ್ನು ನಿಲ್ಲಿಸುವ (ಡಿ-ಆರ್ಬಿಟ್ ) ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ. ಇಂದು ಭಾರತೀಯ ಕಾಲಮಾನ 8.50 ರ ಸುಮಾರಿಗೆ ಪ್ರಾರಂಭವಾದ ಈ ಪ್ರಕ್ರಿಯೆ ಯಾವುದೇ ತೊಂದರೆಗಳಿಲ್ಲದೆ ನಾಲ್ಕು ಸೆಕೆಂಡ್ ಗಳ ಅಂತರದಲ್ಲಿ ಕೊನೆಗೊಂಡಿದೆ.
ಭಾನುವಾರವಷ್ಟೇ ಚಂದ್ರಯಾನ 2 ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು,ಈಗ ಚಂದ್ರನ ನತ್ತ ಮೂನ್ ಲ್ಯಾಂಡರ್ ಇನ್ನಷ್ಟು ಹತ್ತಿರಗೊಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿದ್ದಾರೆ.
ಅದರಂತೆ ಮೂನ್ ಲ್ಯಾಂಡರ್ ಚಂದ್ರನ ಮೇಲ್ಮೈನ 109 x 120 ಕಿ.ಮೀ ವ್ಯಾಪ್ತಿಯೊಳಗೆ ತಳ್ಳಲ್ಪಟ್ಟಿದೆ. ಇದು ಮೊದಲ ಹಂತದ ಪ್ರಕ್ರಿಯೆಯಾಗಿದ್ದು, ಸೆ.4ರಂದು 3.30 ರಿಂದ 4.30 ರೊಳಗೆ 2ನೇ ಹಂತದ ಕಾರ್ಯಾಚರಣೆ ನಡೆಯಲಿದೆ.