ಬೆಂಗಳೂರು, ಜೂ. 20 (DaijiworldNews/AA): ಹೈಸ್ಕೂಲ್ಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಉಪನ್ಯಾಸಕರ ವೃಂದ ನಿಯಮಕ್ಕೆ ಸರ್ಕಾರ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯಂತೆ 9 ಹಾಗೂ 10ನೇ ತರಗತಿಗೆ ಸರ್ಕಾರಿ ಪಿಯುಸಿ ಉಪನ್ಯಾಸಕರು ಪಾಠ ಬೋಧಿಸಬೇಕಿದೆ.

ಪದವಿ ಪೂರ್ವ ಶಿಕ್ಷಣ ನೇಮಕಾತಿ ನಿಯಮಗಳು-2013ಕ್ಕೆ ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದೆ. ತಿದ್ದುಪಡಿಯ ಕರಡು ನಿಯಮವನ್ನು ಸರ್ಕಾರ ಈಗಾಗಲೇ ಪ್ರಕಟಿಸಿದ್ದು, ಕರಡು ನಿಯಮಕ್ಕೆ 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹಳೆಯ ನಿಯಮದ ಪ್ರಕಾರ, ಪಿಯು ಉಪನ್ಯಾಸಕರಿಗೆ ಕೇವಲ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಮಾತ್ರ ಪಾಠ ಮಾಡಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಅವರ ಬೋಧಿಸಬೇಕಿದೆ.
ಇನ್ನು ಸರ್ಕಾರದ ಈ ಹೊಸ ನಿಯಮಕ್ಕೆ ಪದವಿಪೂರ್ವ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಿಯಮನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದೆ.