ನವದೆಹಲಿ, ಸೆ 03 (Daijiworld News/MSP): ಭಾರತದ ವಾಯುಪಡೆಗೆ ಮತ್ತಷ್ಟು ಆನೆಬಲ ಬಂದಿದೆ. ಮಂಗಳವಾರ ಪಠಾಣ್ ಕೋಟ್ ವಾಯು ನೆಲೆಗೆ ಯುದ್ಧ ಕೌಶಲ್ಯದ ಹೊಂದಿರುವ 8 ಬೋಯಿಂಗ್ ಎ ಎಚ್-64ಇ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ ಸೇರ್ಪಡೆಯಾಗಿದೆ.
AH-64E ಅಪಾಚೆ, ಜಗತ್ತಿನಲ್ಲೇ ಅತ್ಯಾಧುನಿಕ ಅಟ್ಯಾಕ್ ಹೆಲಿಕ್ಯಾಪ್ಟರ್ ಗಳಾಗಿದ್ದು ಇದನ್ನು ಅಮೇರಿಕಾದಿಂದ ತರಿಸಿಕೊಳ್ಳಲಾಗಿದೆ. ಭಾರತೀಯ ವಾಯುಸೇನೆಗೆ ಒಟ್ಟು 22 AH-64E ಅಪಾಚೆ ಹೆಲಿಕಾಪ್ಟರ್ ಸೇರ್ಪಡೆಗೊಳ್ಳಲಿದ್ದು, ಮೊದಲ ಹಂತದಲ್ಲಿ 8 ಹೆಲಿಕಾಪ್ಟರ್ ಐಎಎಫ್ ಗೆ ಸೇರ್ಪಡೆಯಾಗಿದೆ ಎಂದು ವಾಯುಸೇನೆ ತಿಳಿಸಿದೆ. ಇನ್ನು 2020ರ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಲಿದೆ.
ಅಪಾಜೆ ಗಾರ್ಡಿಯನ್ ಯುದ್ಧ ಹೆಲಿಕಾಪ್ಟರ್ ಸೇರ್ಪಡೆ ಸಮಾರಂಭದಲ್ಲಿ ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋವಾ ಸಮ್ಮುಖದಲ್ಲಿ AH-64E ಅಪಾಚೆ ಹೆಲಿಕಾಪ್ಟರ್ ಸೇರ್ಪಡೆಗೊಂಡಿದೆ. ಅಪಾಚೆ ಹೆಲಿಕಾಪ್ಟರ್ ಆಂಟಿ ಆರ್ಮಡ್ ಮಿಸೈಲ್ ಗಳನ್ನು ಹೊತ್ತು ದಾಳಿ ನಡೆಸುತ್ತಿದೆ. ಇದು ಎಂಥಹ ಶಸ್ತ್ರ ಸಜ್ಜಿತ ಟ್ಯಾಂಕ್ ನ್ನು ಬೇಕಾದರೂ ದ್ವಂಸ ಮಾಡಬಲ್ಲ ಬಲಶಾಲಿಯಾಗಿದೆ. ಎಡ್ವನ್ಸ್ ಕ್ಯಾಮರಾ, ಡಾಟಾ ಉಪಕರಣ, ವೈರಿ ವಿಮಾನಗಳ ಚಲನವಲನ ಪತ್ತೆ ಹಚ್ಚಿ ಸಂದೇಶ ರವಾನಿಸುತ್ತದೆ ಚಾಣ್ಯಾಕ್ಯತೆಯನ್ನು ಅಪಾಚೆ ಹೆಲಿಕಾಪ್ಟರ್ ಹೊಂದಿದೆ.
2015ರಲ್ಲಿ ಭಾರತ ಸರಕಾರ 13, 952 ಕೋಟಿ ರೂಪಾಯಿ ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್ ಖರೀದಿಗಾಗಿ ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡಿತ್ತು. 2020ರ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಲಿದೆ.