ನವದೆಹಲಿ, ಸೆ 03 (DaijiworldNews/SM): ದೇಶದಲ್ಲಿನ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ನರೇಂದ್ರ ಮೋದಿಯ ಧೋರಣೆಗಳೇ ಕಾರಣ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ರಾಷ್ಟ್ರದ ಆರ್ಥಿಕತೆಯ ಶೇ.5ರಷ್ಟು ಜಿಡಿಪಿ ಎಂದರೇನು ಗೊತ್ತಿದೆಯೆ ಎಂದು ಕೇಂದ್ರ ಸರ್ಕಾರವನ್ನು ಚಿದಂಬರಂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಬಂಧನದಲ್ಲಿರುವ ಅವರು, ಮಂಗಳವಾರ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಅವರ ಸಿಬಿಐ ಕಸ್ಟಡಿಯನ್ನು ನ್ಯಾಯಾಲಯ ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿದೆ.