ನವದೆಹಲಿ,ಸೆ 04 (Daijiworld News/MSP): ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚು ಕಡಿಮೆ ಆದ್ರೆ ಇದಕ್ಕೆ ನೇರವಾಗಿ ಕೇಂದ್ರ ಸರ್ಕಾರ ಹಾಗೂ ಅಕ್ರಮ ಹಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ದಾಖಲಾಗಿರುವ ದೆಹಲಿಯ ಆರ್ಎಂಎಲ್ ಆಸ್ಪತ್ರೆಯ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಥುನ್ ರೈ, ಡಿ.ಕೆ.ಶಿವಕುಮಾರ್ ಅವರು ನಮ್ಮ ನಾಯಕ ಅವರಿಗೇನಾದ್ರೂ ಆದ್ರೆ ಅದಕ್ಕೆ ನೇರ ಕೇಂದ್ರ ಸರ್ಕಾರ ಹೊಣೆ ಮತ್ತು ಇಡಿ ಅಧಿಕಾರಿಗಳು ಕೂಡಾ ಕಾರಣಕರ್ತರಾಗುತ್ತಾರೆ ಎಂದು ಕಿಡಿಕಾರಿದರು.
ಡಿಕೆಶಿ ಅವರ ತಮ್ಮ ಡಿ.ಕೆ.ಸುರೇಶ್ ಮತ್ತು ಅವರ ಬಾಮೈದ ಡಾ.ರಂಗನಾಥ್ ಅವರನ್ನು ಕೂಡಾ ಅಧಿಕಾರಿಗಳು ಅವರ ಆರೋಗ್ಯ ಸ್ಥಿತಿಗತಿ ತಿಳಿದುಕೊಳ್ಳಲು ಬಿಡುತ್ತಿಲ್ಲ. ರಂಗನಾಥ್ ವೈದ್ಯರಾಗಿದ್ದರೂ ಅವರ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ಅವರು ರಕ್ತದೊತ್ತಡ ನಿಯಂತ್ರಣಕ್ಕೆ ಬರಬೇಕಿದೆ. ಈ ನಡುವೆ ಅವರಿಗೆ ಎದೆ ನೋವು ಕೂಡಾ ಕಾಣಿಸಿಕೊಂಡಿದೆ.ಆದ್ರೆ ಇಡಿ ಅಧಿಕಾರಿಗಳು ಡಿಕೆಶಿ ಅವರ ಆರೋಗ್ಯ ಸಹಜವಾಗಿದೆ ಎಂಬ ವರದಿ ನೀಡಿ ಡಿಸ್ಚಾರ್ಜ್ ಮಾಡಬೇಕೆಂದು ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅವರನ್ನು ಭೇಟಿಯಾಗಲು ಬಂದ ಕಾಂಗ್ರೆಸ್ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಉಗ್ರಪ್ಪ ನಡು ರಸ್ತೆಯಲ್ಲಿ ಕಾಯುವಂತಾಗಿದೆ. ಪ್ರವೇಶಕ್ಕೆ ಅವಕಾಶ ನೀಡದೆ ನಮ್ಮನ್ನು ಸತಾಯಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.