ನವದೆಹಲಿ, ಸೆ 4, (Daijiworld News/MSP): ಉಗ್ರರಾದ ಮೌಲಾನ ಮಸೂದ್ ಅಜರ್, ದಾವೂದ್ ಇಬ್ರಾಹಿಂ, ಝಾಕಿ ಉರ್ ರೆಹಮಾನ್ ಲಖ್ವಿ ಹಾಗೂ ಹಫೀಜ್ ಸಯೀದ್ ಅವರನ್ನು ತಿದ್ದುಪಡಿಯಾದ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ (ಯುಎಪಿಎ)ಅಡಿಯಲ್ಲಿ ಸೇರಿಸಿದೆ.
ಅಂದರೆ ನಿಷೇಧಿತ ಇವರನ್ನು ಉಗ್ರರು ಎಂದು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದ್ದು ಉಗ್ರರ ವಿರುದ್ದ ಕೇಂದ್ರ ಮತ್ತಷ್ಟು ಉಗ್ರ ಕ್ರಮವನ್ನು ಕೈಗೊಂಡಿದೆ. .
ಗೆಜೆಟ್ ಅಧಿಸೂಚನೆ ಪ್ರಕಾರ, ಮೌಲಾನಾ ಮಸೂದ್ ಅಜರ್ ಅಲಿಯಾಸ್ ಮೌಲಾನಾ ಮೊಹಮ್ಮದ್ ಮಸೂದ್ ಅಜರ್ ಅಲ್ವಿ , ಜೈಷೆ- ಮೊಹಮದ್ ಸಂಘಟನೆಯ ಸಂಸ್ಥಾಪಕ ಹಾಗೂ ಮುಖಂಡನಾಗಿದ್ದಾನೆ. ಇದು ಯುಎಪಿಎ ಅಡಿಯ ಪಟ್ಟಿಯಲ್ಲಿನ ಆರನೇ ಪ್ರಮುಖ ಸಂಘಟನೆಯಾಗಿದೆ. ಹಫೀಜ್ ಮೊಹಮ್ಮದ್ ಸಯೀದ್ ಲಷ್ಕರ್ -ಇ-ತೊಯ್ಬಾ(ಎಲ್ ಇಟಿ) ಮತ್ತು ಜಮಾತ್ -ಉದ್ -ದಾವಾ (ಜೆಯುಡಿ) ನಿಷೇಧಿತ ಸಂಘಟನೆಗಳ ಸಂಸ್ಥಾಪಕನಾಗಿದ್ದಾನೆ. ಎಲ್ ಇಟಿ ಯುಎಪಿಎ ಕಾಯ್ದೆಯಡಿ 5ನೇ ಸ್ಥಾನದಲ್ಲಿದೆ. ಹಫೀಜ್ ಮೊಹಮ್ಮದ್ ಸಯೀದ್ ಅನ್ನು ವಿಶ್ವಸಂಸ್ಥೆ, 2008ರ ಡಿಸೆಂಬರ್ 10ರಂದು 1267ರ ಭದ್ರತಾ ಮಂಡಳಿಯ ಕೌನ್ಸಿಲ್ ನಿರ್ಣಯದ ಅನುಸಾರ ಜಾಗತಿಕ ಉಗ್ರ ಎಂದು ಘೋಷಿಸಿತ್ತು.
ಹೊಸ ತಿದ್ದುಪಡಿ ಕಾನೂನಿಂದಾಗಿ ದೇಶದಲ್ಲಿ ಉಗ್ರರ ಆಸ್ತಿಪಾಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಜತೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು.