ಬೆಂಗಳೂರು,ಸೆ 05 (Daijiworld News/RD): ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಸಾಫ್ಟ್ ಲ್ಯಾಂಡಿಂಗ್ ಆಗುವ ದಿನ ಸಮೀಪಿಸುತ್ತಿದ್ದು, ಶುಕ್ರವಾರ ಮಧ್ಯರಾತ್ರಿ 1.30 ರಿಂದ 2.30 ರ ನಡುವೆ ಚಂದ್ರನ ಮೇಲ್ಮೈಯಲ್ಲಿ ಚಂದ್ರಯನ 2 ಇಳಿಯಲಿದೆ. ನಂತರ ಶನಿವಾರ ಬೆಳಗಿನ ಜಾವ ೫.೩೦-೬.೩೦ರ ನಡುವೆ ರೋವರ್ ವಿಕ್ರಮ್ ನಿಂದ ಆಚೆ ತೆರಳಿ 14 ದಿನಗಳ ಕಾಲ ಅಧ್ಯಯನ ನಡೆಸಲಿದೆ.
ಇತಿಹಾಸದಲ್ಲಿ ಈ ದಿನ ಮಹತ್ವವಾಗಿದ್ದು, ಈ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿಯಾಗಲಿದ್ದಾರೆ. ಚಂದ್ರಯಾನ 2 ಅನ್ನು ಚಂದ್ರನ ಕಕ್ಷೆಯಿಂದ ಹೊರ ತರುವ 2 ನೇ ಪ್ರಯತ್ನ ಬುಧವಾರ ಬೆಳಗಿನ ಜಾವ ಯಶಸ್ವಿಯಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಚಂದ್ರನ ಮೇಲ್ಮೈ ಯಲ್ಲಿ ವಿಕ್ರಮ್ ಇಳಿದ ಮೇಲೆ ಶನಿವಾರ ಬೆಳಗಿನ ಜಾವ 5.30-6.30 ರ ನಡುವೆ ಪ್ರಜ್ಞಾನ್ (ರೋವರ್) ವಿಕ್ರಮ್ ನಿಂದ ಆಚೆ ತೆರಳಿ 14 ದಿನಗಳ ಕಾಲ ಅಧ್ಯಯನ ನಡೆಸಲಿದೆ.
ಈ ಸಂಬಂಧ ಇಸ್ರೋ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅಧ್ಯಕ್ಷ ಕೆ. ಸಿವನ್ ರೋವರ್ನ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. 'ಇಂದು ನಮಗೆ ಅತ್ಯಂತ ಮಹತ್ವದ ದಿನವಾಗಿದೆ. ಚಂದ್ರಯಾನ್-2 ನೌಕೆ ಚಂದ್ರನಿಗೆ ಇನ್ನಷ್ಟು ಹತ್ತಿರವಾಗಿದೆ. ಚಂದ್ರಯಾನ-2 ನಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಇಸ್ರೋ ಕೈಗೊಂಡಿರೋ ಚಂದ್ರಯಾನ್-2 ಜುಲೈ 22ರಂದು ನಭಕ್ಕೆ ಜಿಗಿದಿತ್ತು. ಈಗ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಉಪಗ್ರಹ ಸೇರಿದೆ. ಕಕ್ಷೆ ಬದಲಾವಣೆಯ ಮೊದಲ ಹಂತ ಇಂದು ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.