ನವದೆಹಲಿ, ಸೆ 05 (Daijiworld News/MSP): ಇಂದಿನಿಂದ ಜಿಯೋ ಗಿಗಾ ಫೈಬರ್ ಸೇವೆ (ಸೆಪ್ಟೆಂಬರ್ 5) ದೇಶಾದ್ಯಂತ ಲಭ್ಯವಾಗಲಿದೆ. ಜಿಯೋ ನೆಟ್ವರ್ಕ್ಗಳು ಅನೇಕ ನೆಟ್ವರ್ಕ್ ಪ್ರೊವೈಡರ್ಗಳು ತಮ್ಮ ಗ್ರಾಹಕರನ್ನು ಕಳೆದುಕೊಂಡಿತ್ತು. ಅಲ್ಲಿಯವರೆಗೆ ಏಕತಾನತೆಯಲ್ಲಿ ಹೋಗುತ್ತಿದ್ದ ಮೊಬೈಲ್ ನೆಟ್ವರ್ಕ್ಗಳು ಜಿಯೋ ಬಂದ ಬಳಿಕ ಪೈಪೋಟಿಯೊಂದಿಗೆ ಭಾರೀ ಹೊಡೆತವನ್ನು ನೀಡಿತ್ತು.
ಇದೀಗ ಇಂದಿನಿಂದ ರಿಲಾಯನ್ಸ್ ಸಂಸ್ಥೆ ಮೊಬೈಲ್ ನೆಟ್ ವರ್ಕ್ ಸೇವೆಯೊಂದಿಗೆ ಜಿಯೋ ಡಿಟಿಎಚ್ ಸೇವೆಗೆ ತಮ್ಮನ್ನು ತೆರೆದುಕೊಂಡಿದ್ದು ಹೀಗಾಗಿ ಡಿಟಿಎಚ್ ಸೇವೆಯಲ್ಲಿ ಇನ್ನು ಪೈಪೋಟಿಗಳು ಆರಂಭಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ಜಿಯೋ ಫೈಬರ್ ಡಿಟಿಎಚ್ ಸೇವೆ ಕಡಿಮೆ ದರವನ್ನು ಘೋಷಿಸಿದ್ದು, ತನ್ನತ್ತ ಇತರ ಡಿಟಿಎಚ್ ಸೇವೆ ಬಳಕೆದಾರ ಗ್ರಾಹಕರನ್ನು ಸೆಳೆಯುವುದು ಖಾತ್ರಿಯಾಗಿದೆ..
ಈ ಸೇವೆಯನ್ನು ಹಂತ ಹಂತವಾಗಿ ಅನುಷ್ಟಾನ ಮಾಡಿಲು ರಿಲಯನ್ಸ್ ನಿರ್ಧಾರಿಸಿದ್ದು, ಸೆ. 5ರ ಮೊದಲ ಹಂತದಲ್ಲಿ ದೇಶದ ಆಯ್ದ ನಗರಗಳನ್ನು ಮಾತ್ರ ಇದಕ್ಕೆ ಸೇರ್ಪಡೆಗೊಳಿಸಲಾಗಿದೆ.
ಜಿಯೋ ಫೈಬರ್ ಸೇವೆಯೂ ತನ್ನದೇ ಹೋಮ್ ಫೋನ್ ಸರ್ವಿಸ್ ಕೂಡಾ ಹೊಂದಿದ್ದು, ಇದರಲ್ಲಿ ನೀಡಲಾಗುವ ವಯರ್ ಲೆಸ್ ಫೋನ್ ಬಳಸಿ ಸ್ಥಳೀಯ ಮತ್ತು ಎಸ್ ಟಿಡಿ ವೈಸ್ ಕರೆ ಮಾಡಬಹುದಾಗಿದೆ. ಮಾತ್ರವಲ್ಲದೆ ಅಂತಾರಾಷ್ಟ್ರೀಯ ಕಾಲ್ ಕೂಡಾ ಅತ್ಯಂತ ಕಡಿಮೆ ವೆಚ್ಚಕ್ಕೆ ಮಾಡಬಹುದಾಗಿದೆ. ಈ ಸೇವೆ ಪಡೆಯುವ ಗ್ರಾಹಕರಿಗೆ ಎಚ್ ಡಿ 4 ಕೆ ಟಿವಿ, ಸೆಟಪ್ ಬಾಕ್ಸ್ ಉಚಿತವಾಗಿ ನೀಡಲಾಗುತ್ತದೆ ರಿಲಾಯನ್ಸ್ ತಿಳಿಸಿತ್ತು.