ನವದೆಹಲಿ, ಸೆ 05 (DaijiworldNews/SM): ಐಎನ್ಎಕ್ಸ್ ಮೀಡಿಯಾ ಹಗಣರದಲ್ಲಿ ಆರೋಪಿಯಾಗಿರುವ, ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರನ್ನು ತಿಹಾರಿ ಜೈಲಿಗೆ ಹಸ್ತಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಸೆ.19ರವರೆಗೆ ಅವರು ತಿಹಾರ್ ಜೈಲಿನಲ್ಲಿ ಉಳಿಯಲಿದ್ದಾರೆ. ಚಿದಂಬರಂ ಅವರು ಕಳೆದ 15 ದಿನಗಳಿಂದ ಸಿಬಿಐ ಕಸ್ಟಡಿಯಲ್ಲಿ ಇದ್ದಾರೆ.
ಇಂದಿನ ವಿಚಾರಣೆ ವೇಳೆ ಚಿದಂಬರಂ ವಕೀಲರು, ಅವರನ್ನು ಬೇಕಾದರೆ ಜಾರಿ ನಿರ್ದೇಶನಾಲಯದ ವಶಕ್ಕೊಪ್ಪಿಸಬಹುದು, ನ್ಯಾಯಾಂಗ ಬಂಧನವೇಕೆ ಎಂದು ವಾದ ಮಾಡಿದರು. ಆದರೆ ಇದಕ್ಕೊಪ್ಪದ ನ್ಯಾಯಾಲಯ ಆಪಾದಿತರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ನ್ಯಾಯಾಂಗ ಬಂಧನ ಸೂಕ್ತವಾಗಿದೆ ಎಂಬ ಆದೇಶ ನೀಡಿದೆ.