ನವದೆಹಲಿ, ಸೆ.06(Daijiworld News/SS): ಆರ್ಥಿಕ ಹಿಂಜರಿತ ತಡೆಗೆ ಪರಿಹಾರೋಪಾಯ ಕೈಗೊಳ್ಳಬೇಕು ಇಲ್ಲವೇ ಅರ್ಥವ್ಯವಸ್ಥೆಯನ್ನು ಸದೃಢಗೊಳಿಸುವ ಕುರಿತು ದೇಶದ ಜನತೆಗೆ ಭರವಸೆ ನೀಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.
ಭಾರತದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೌನ ತಾಳಿರುವುದು ತುಂಬಾ ಅಪಾಯಕಾರಿ. ಮನ್ನಿಸುವಿಕೆ ಅಥವಾ ವಾಕ್ಚಾತುರ್ಯ ಕೆಲಸ ಮಾಡುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ದೇಶದ ಜನರಿಗೆ ಭರವಸೆ ನೀಡಲು ಕೇಂದ್ರ ಸರ್ಕಾರಕ್ಕೆ ಪರಿಹಾರ ಅಥವಾ ಶಕ್ತಿಯೂ ಇಲ್ಲದಂತಾಗಿದೆ. ಈ ವಿಷಯಯದಲ್ಲಿ ಕಾರಣಗಳು, ವಾಕ್ಚಾತುರ್ಯ ಮತ್ತು ಮನ್ನಿಸುವಿಕೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಆರ್ಥಿಕ ಪ್ರಗತಿ ಇಳಿಮುಖಗೊಳ್ಳುತ್ತಿರುವ ಬಗ್ಗೆ ಹಲವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಕುಸಿತ ತಡೆಗೆ ಕೇಂದ್ರ ಸರಕಾರ ತ್ವರಿತಗತಿಯಲ್ಲಿ ಸುಧಾರಣಾ ಕ್ರಮ ಕೈಗೊಳ್ಳಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.