ಬೆಂಗಳೂರು,ಸೆ 06 (Daijiworld News/RD): ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರಿಗೆ ಭಾರೀ ದಂಡ ಬಿದ್ದಿದ್ದು ವಾಹನ ಸವಾರ ಜೇಬಿಗೆ ಕತ್ತರಿ ಬಿದ್ದಿದ್ದು, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನಕ್ಕೆ ಬರೋಬ್ಬರಿ ೩೦ಲಕ್ಷ ದಂಡ ವಸೂಲಿಯಾಗಿದೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 41 ಪ್ರಕರಣಗಳು ದಾಖಲಾಗಿದ್ದು, 1.19 ಲಕ್ಷ ದಂಡ ವಿಧಿಸಲಾಗಿದೆ. ಇದರಲ್ಲಿ ಒಬ್ಬರು ಲೈಸನ್ಸ್ ಇಲ್ಲದ ಹಾಗೂ ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೂ.15 ಸಾವಿರ ದಂಡ ಪಾವತಿಸಿದ್ದರೆ, 11 ಜನರು ತಲಾ ರೂ.9500 ದಂಡ ಪಾವತಿಸಿದ್ದಾರೆ.
ಇವೆಲ್ಲವೂ ನ್ಯಾಯಾಲಯದ ಮೂಲಕ ಪಾವತಿಯಾಗಿದೆ. ಪೊಲೀಸ್ ಕಮಿಷನರೆಟ್'ಗೆ ಈ ವರೆಗೆ ಸರ್ಕಾರದಿಂದ ಯಾವ ಸೂಚನೆ ಬಂದಿಲ್ಲ. ಬರೀ ಪ್ರಕರಣ ಮಾತ್ರ ದಾಖಲಿಸಿ ಕೋರ್ಟಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.