ಉತ್ತರಪ್ರದೇಶ, ಸೆ.06(Daijiworld News/SS): ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದ ಉರ್ಸ್ ಉತ್ಸವದಲ್ಲಿ ಹಿಂದೂಗಳಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ ಆರೋಪದ ಮೇಲೆ 43 ಮಂದಿ ಮುಸ್ಲಿಂರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 31ರಂದು ಚಾರ್ಖಾರಿ ಪ್ರದೇಶದ ಸಲಾತ್ ಗ್ರಾಮದಲ್ಲಿ ಶೇಖ್ ಪೀರ್ ಬಾಬ್ ಅವರ ಉರ್ಸ್ ಸಂದರ್ಭದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿ ಬಿರಿಯಾನಿಯನ್ನು ಉದ್ದೇಶಪೂರ್ವಕವಾಗಿ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 43 ಮುಸ್ಲಿಂರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದೀಗ ಈ ಘಟನೆಯ ಕುರಿತು 43 ಮುಸ್ಲಿಂರ ವಿರುದ್ಧ 153ಎ(ಧರ್ಮದ ನೆಲೆಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295ಎ(ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 420(ವಂಚನೆ) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಕುರಿತು ಬಿಜೆಪಿ ಶಾಸಕ ಬ್ರಿಜ್ಛೂಷಣ್ ರಾಜಪೂತ್ ಮಾತನಾಡಿ, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.