ನವದೆಹಲಿ, ಸೆ.07(Daijiworld News/SS): ಚಂದ್ರಯಾನ 2 ವೈಫಲ್ಯದಿಂದ ಯಾವುದೇ ಇತರೆ ಯೋಜನೆಗಳಿಗೆ ಸಮಸ್ಯೆಯಾಗುವುದಿಲ್ಲ ಎಂದು ಇಸ್ರೋ ಅಧಿಕಾರಿ ಪಿಜಿ ದಿವಾಕರ್ ಅವರು ಹೇಳಿದ್ದಾರೆ.
ಚಂದ್ರಯಾನ 2 ಮಿಷನ್ ವೈಫಲ್ಯದಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ ಇತರೆ ಯಾವುದೇ ಮಿಷನ್'ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಚಂದ್ರಯಾನ 2 ವೈಫಲ್ಯ, 2022ಕ್ಕೆ ಉಡಾವಣೆಯಾಗಲಿರುವ ಮಾನವ ಸಹಿತ ಗಗನಯಾನ ಸೇರಿದಂತೆ ಇತರೆ ಯಾವುದೇ ಮಿಷನ್'ಗಳಿಗೆ ತೊಂದರೆ ಮಾಡಲ್ಲ. ಚಂದ್ರಯಾನ ಮತ್ತು ಗಗನಯಾನ ಎರಡೂ ಮಿಷನ್'ಗಳು ವಿಭಿನ್ನ ಉದ್ದೇಶ ಮತ್ತು ಆಯಾಮಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.
ಚಂದ್ರಯಾನ 2 ವೈಫಲ್ಯದಿಂದ ಯಾವುದೇ ಇತರೆ ಯೋಜನೆಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಪ್ರತಿಯೊಂದು ಯೋಜನೆಯೂ ವಿಭಿನ್ನವಾಗಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡ್ ಆದ ವಿಶ್ವದ ನಾಲ್ಕನೇ ದೇಶ ಎಂಬುದರ ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ಹಾಗೂ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯಶಸ್ವಿಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿತ್ತು. ಆದರೆ ಕೊನೆಯ ಹಂತದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗದಿರುವುದರಿಂದ ಇಸ್ರೋ ವಿಜ್ಞಾನಿಗಳಿಗೆ ನಿರಾಸೆ ಉಂಟು ಮಾಡಿದೆ.