ಶಿಮ್ಲಾ, ಸೆ.08(Daijiworld News/SS): ಹಿಮಾಚಲ ಪ್ರದೇಶದ ಚಾಂಬಾ ಜಿಲ್ಲೆಯಲ್ಲಿ ಭೂಕಂಪನ ಅನುಭವವಾಗಿದೆ. ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಇದುವರೆಗೂ ಯಾವುದೇ ವರದಿಯಾಗಿಲ್ಲ.
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ್ದು ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4 ತೀವೃತೆ ದಾಖಲಾಗಿದೆ. ಭೂಕಂಪನದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಪರ್ವತಮಯ ಹಿಮಾಚಲ ರಾಜ್ಯದ ಬಹುತೇಕ ಭಾಗಗಳು ಅಧಿಕ ಭೂಗರ್ಭ ಚಟುವಟಿಕೆಗಳ ಸೂಕ್ಷ್ಮ ಸ್ಥಳಗಳಾಗಿವೆ. ಈ ಪ್ರಾಂತ್ಯದಲ್ಲಿ ಲಘು ಕಂಪನಗಳು ಸಾಮಾನ್ಯ ವಿದ್ಯಮಾನವಾಗಿದೆ.