ಬೆಂಗಳೂರು,ಸೆ 08 (Daijiworld News/RD): ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಲ್ಯಾಂಡರ್ ‘ವಿಕ್ರಮ್’ ಅಂತಿಮ ಘಟ್ಟದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಇಸ್ರೋ ಯಶಸ್ವಿಯಾಗಿದ್ದು, ಹೊಸ ಭರವಸೆಯನ್ನು ಮೂಡಿಸಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಿರೋದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ. ಸದ್ಯ ಆರ್ಬಿಟರ್ ಸೆರೆ ಹಿಡಿದಿರುವ ವಿಕ್ರಮ್ ಲ್ಯಾಂಡರ್ ನ ಫೋಟೋಗಳು ಹಾಗೂ ಮಾಹಿತಿಯನ್ನು ಪರಿಶೀಲನೆ ನಡೆಸುತ್ತೇವೆ. ಆದಷ್ಟು ಬೇಗ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೀಗ ವಿಕ್ರಮ್ ಚಂದಿರನಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ ನ ಚಿತ್ರಗಳು ಇಸ್ರೋಗೆ ಲಭ್ಯವಾಗಿದ್ದು, ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ನ ಚಿತ್ರಗಳನ್ನು ಬೆಂಗಳೂರಿನ ಇಸ್ರೋ ಗೆ ರವಾನಿಸಿದೆ.
ಸೆ.7 ಶನಿವಾರ ಮುಂಜಾನೆ 1.30ರ ಸುಮಾರಿಗೆ ಚಂದಿರನ್ನು ಸುತ್ತುತ್ತಿದ್ದ ಆರ್ಬಿಟರ್ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿತ್ತು. ನಿಧಾನವಾಗಿ ಚಂದ್ರನ ಮೇಲ್ಮೈನತ್ತ ಪ್ರಯಾಣ ಬೆಳೆಸಿತ್ತು. ಆದರೆ, ಚಂದಿರ ಮೇಲ್ಮೈ ತಲುಪಲು ಕೇವಲ 2.1 ಕಿ.ಮೀ ದೂರದಲ್ಲಿದ್ದಾಗ, ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಕೊನೇ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಸಣ್ಣ ನಿರಾಶೆಯನ್ನುಂಟು ಮಾಡಿತ್ತು. ಲ್ಯಾಂಡರ್ ವಿಕ್ರಂ ಇನ್ನೇನು ಚಂದ್ರದಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಡಿದುಕೊಂಡಿತು. ಈ ಘಟನೆ ಭಾರತೀಯರಲ್ಲಿ ತಾತ್ಕಾಲಿಕ ನಿರಾಶೆ ಉಂಟುಮಾಡಿತ್ತು. ಆದರೆ ಇದೀಗ ಲ್ಯಾಂಡರ್ನ ಛಾಯಾಚಿತ್ರವಂತೂ ಇಸ್ರೋಗೆ ಸಿಕ್ಕಿದೆ. ಮುಂದಿನ ಹಂತದಲ್ಲಿ ಲ್ಯಾಂಡರ್ ಜೊತೆ ಇಸ್ರೋಗೆ ಸಂಪರ್ಕ ಸಾಧ್ಯವಾಧ್ಯ, ವಿಕ್ರಮ್ ಲ್ಯಾಂಡರ್ನ ಸ್ಥಿತಿಗತಿ ತಿಳಿದುಬರಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದಲ್ಲಿ, ಲ್ಯಾಂಡರ್ನ ಒಳಭಾಗದಲ್ಲಿರುವ ಪ್ರಜ್ಞಾನ್ ರೋವರ್ ಕೂಡಾ ಸುರಕ್ಷಿತವಾಗಿರಬಹುದು, ಚಂದ್ರನ ಅಂಗಳದಲ್ಲಿ ಪೂರ್ವ ನಿರ್ಧರಿತ ಯೋಜನೆಯಂತೆ ನಡೆದಾಡಬಹುದು ಎಂದು ಇಸ್ರೋ ವಿಜ್ಞಾನಿಗಳು ಅಭಿಪ್ರಾಯಪಟ್ಟರು.