ನವದೆಹಲಿ, ಸೆ.08(Daijiworld News/SS): ವಿಕಾಸವೇ ಇಲ್ಲದೆ 100 ದಿನ ಪೂರೈಸಿದ ಮೋದಿ ಸರ್ಕಾರಕ್ಕೆ ಅಭಿನಂದನೆಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಇಂದಿಗೆ 100 ದಿನಗಳನ್ನು ಸರ್ಕಾರ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರಕ್ಕೆ ವ್ಯಂಗ್ಯವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಅಭಿವೃದ್ಧಿಯೇ ಇಲ್ಲದೆ 100 ದಿನ ಪೂರೈಸಿದ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ವಿಕಾಸವೇ ಇಲ್ಲದೆ 100 ದಿನ ಪೂರೈಸಿದ ಮೋದಿ ಸರ್ಕಾರಕ್ಕೆ ಅಭಿನಂದನೆಗಳು. ಪ್ರಜಾಪ್ರಭುತ್ವದ ನಿರಂತರ ಅಧಃಪತನ, ಟೀಕೆಗಳನ್ನು ಮಟ್ಟಹಾಕಲು ವಿಧೇಯ ಮಾಧ್ಯಮಗಳಲ್ಲಿ ಕತ್ತು ಹಿಸುಕುವುದು ಮತ್ತು ನಾಯಕತ್ವದ ಕೊರತೆ, ನಿರ್ದೇಶನ ಮತ್ತು ನಮ್ಮ ಕುಸಿತಗೊಂಡ ಆರ್ಥಿಕತೆಯನ್ನು ಮೇಲೆತ್ತಲು ಅಗತ್ಯವಿರುವಲ್ಲಿ ಯೋಜನೆಗಳ ಕೊರತೆಯೇ ಕಾಣಿಸುತ್ತಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಸರ್ಕಾರದಲ್ಲಿ ನಾಯಕತ್ವ, ನಿರ್ದೇಶನ ಮತ್ತು ಕುಂಠಿತಗೊಂಡಿರುವ ಆರ್ಥಿಕತೆಯನ್ನು ಅಭಿವೃದ್ಧಿಯತ್ತ ತಿರುಗಿಸುವ ಯೋಜನೆಗಳ ಕೊರತೆಯಿದೆ ಎಂದು ಕೇಂದ್ರದ ವಿರುದ್ಧ ಆರೋಪಿಸಿದ್ದಾರೆ.