ಬೆಳಗಾವಿ, ಸೆ 09 (Daijiworld News/RD): ಗೋಕಾಕ್ ನಲ್ಲಿ ಜಾರಕಿಹೊಳಿ ಎಂಬ ಭದ್ರ ಸಾಮ್ರಾಜ್ಯ ಕಟ್ಟಿದ್ದು ಜನರ ಸೇವೆಗಾಗಿ ಹಾಗೂ ಅವರ ಉಳಿತಿಗಾಗಿ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ ಜಿಲ್ಲೆಯ ಜನತೆ ನನ್ನನ್ನು ನಂಬಿದ್ದಾರೆ, ಅವರಿಗೆ ನನು ಮೋಸ ಮಾಡಲ್ಲ ಹೀಗಾಗಿ ನಾನು ಆ ಕ್ಷೇತ್ರಕ್ಕೆ ಹೋಗುತ್ತೇನೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ದುರುದ್ದೇಶ ಇಲ್ಲ. ಜನರ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿಯ ಸಹೋದರನಾಗಿರುವ ರಮೇಶ್ ಜಾರಕಿಹೊಳಿ ವಿರುದ್ದ ಹರಿಹಾಯ್ದರು. ರಮೇಶ್ ಜಾರಕಿಹೊಳಿ ಅನರ್ಹ ಶಾಸಕನಾಗಿದ್ದು, ಅವನಿಗೆ ತಮ್ಮ ಸ್ಥಾನದ ಬಗ್ಗೆ ಅರಿವಿಲ್ಲ ಎಂದು ಲೇವಡಿ ಮಾಡಿದರು. ರಮೇಶ್ ರಾಜ್ಯಕ್ಕೆ ದೊಡ್ಡವನಿರಬಹುದು. ಆದರೆ ನಮ್ಮ ದೃಷ್ಠಿಯಲ್ಲಿ ಅವರು ಸಾಮಾಜಿಕ, ರಾಜಕೀಯವಾಗಿ ಯಾವುದೇ ರೀತಿಯ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.