ಇಡುಕ್ಕಿ, ಸೆ 10 (Daijiworld News/MSP): ಆಯುಸ್ಸು ಗಟ್ಟಿ ಇದ್ದರೆ ಯಾವುದೇ ಅಪಾಯ ಬಂದರೂ ಪಾರಾಗಬಹುದು ಎನ್ನುವುದಕ್ಕೆ ಕೇರಳದ ಒಂದು ವರ್ಷದ ಹೆಣ್ಣುಮಗುವೇ ಸಾಕ್ಷಿ.. ದಟ್ಟಾರಣ್ಯ ಹಾಗೂ ಕಾಡುಪ್ರಾಣಿಗಳ ಓಡಾಟವಿರುವ ಪ್ರದೇಶದ ಹೆದ್ದಾರಿಯಲ್ಲಿ ಮದ್ಯರಾತ್ರಿ ಏಕಾಂಗಿಯಾಗಿ ಅಂಬೆಗಾಲಿಡುತ್ತಾ ಮಗು ಸಾಗುತ್ತಿದ್ದರೆ ಏನಾಗಬಹುದು?
ಇದು ಕಟ್ಟುಕಥೆಯಲ್ಲಿ. ಈ ನೈಜ ಘಟನೆ ನಡೆದಿದ್ದು ಕೇರಳದ ರಾಜಮಾಲಾ ಎಂಬ ಅರಣ್ಯ ಪ್ರದೇಶದಲ್ಲಿರುವ ಚೆಕ್ ಪೋಸ್ಟ್ ಬಳಿ. ಚಲಿಸುತ್ತಿದ್ದ ಜೀಪಿನಲ್ಲಿ ತಾಯಿಯ ತೊಡೆಯ ಮೇಲೆ ಕುಳಿತಿದ್ದ ಒಂದು ವರ್ಷದ ಹೆಣ್ಣು ಮಗು ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಾಲಾದಲ್ಲಿ ದಟ್ಟ ಕಾಡಿನ ಮಧ್ಯೆ ಇರುವ ರಸ್ತೆಗೆ ಬಿದ್ದಿದೆ. ಬಿದ್ದ ಸ್ಥಳದಿಂದ ಜೀಪ್ ಹಲವು ಕಿಲೋಮೀಟರ್ ದೂರ ಪ್ರಯಾಣಿಸುವವರೆಗೂ ಮಗು ಜೀಪಿನಿಂದ ಜಾರಿಬಿದ್ದಿದೆ ಎಂದು ಮಗುವಿನ ತಾಯಿಗೆ ಅಥವಾ ಇತರಿಗಾಗಲಿ ಅರಿವಿಗೆ ಬರಲಿಲ್ಲ .ಈ ಮಗುವಿನ ಪೋಷಕರು ರಾಜಮಾಲಾ ಚೆಕ್ಪೋಸ್ಟ್ಗೆ ಕೆಲವೇ ಕಿಲೋಮೀಟರ್ ನಷ್ಟು ದೂರವಿರುವ ಕಂಬಲಿಕ್ಕಂಡಮ್ ಎಂಬ ಊರಿನ ನಿವಾಸಿಗಳಾಗಿದ್ದರು.
ಮಗುವಿನ ಹೆತ್ತವರು ಜೀಪಿನಲ್ಲಿ ತಮ್ಮ ಇತರ ಸಂಬಂಧಿಕರೊಂದಿಗೆ ತಮಿಳುನಾಡಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಭಾನುವಾರ ರಾತ್ರಿ ತಮ್ಮೂರಿಗೆ ವಾಪಾಸ್ ಆಗುತ್ತಿದ್ದರು. ದೂರದ ಪ್ರಯಾಣವಾಗಿದ್ದರಿಂದ ದಣಿವಾಗಿ ಎಲ್ಲರೂ ನಿದ್ದೆಗೆ ಜಾರಿದ್ದರು. ಇದೇ ಸಂದರ್ಭದಲ್ಲಿ ತಾಯಿಯ ಮಡಿಲಲ್ಲಿ ಮಲಗಿ ನಿದ್ರಿಸುತ್ತಿದ್ದ ಮಗು ಜೀಪಿನಿಂದ ರಸ್ತೆಗೆ ಬಿದ್ದಿತ್ತು. ಬಿದ್ದ ರಭಸಕ್ಕೆ ಮಗುವಿನ ತಲೆಗೆ ಏಟು ಬಿದ್ದಿದ್ದರಿಂದ ರಸ್ತೆಯಲ್ಲಿ ಅಳುತ್ತಾ ಅಂಬೆಗಾಲಿಡುತ್ತಾ ಮಗು ರಸ್ತೆ ಸನಿಹದಲ್ಲಿ ಇರುವ ಫಾರೆಸ್ಟ್ದಾರಿ ಮೇಲೆ ಬಂದಿತ್ತು.
ಇದೇ ವೇಳೆ ಚೆಕ್ ಪೋಸ್ಟ್ ನಲ್ಲಿದ್ದ ಅರಣ್ಯ ಅಧಿಕಾರಿಗಳಿಗೆ ಮಗುವಿನ ಅಳುವಿನ ಶಬ್ದ ಕೇಳಿ ಆಶ್ಚರ್ಯಚಕಿತರಾದರು. ಮಗು ಬಿದ್ದ ಜಾಗ ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ಓಡಾಟದ ದಾರಿಯಾಗಿತ್ತು. ಮಗುವಿಗಾಗಿ ಹುಡುಕಾಡುತ್ತಾ ಬಂದ ಅರಣ್ಯ ಅಧಿಕಾರಿಗಳಿಗೆ ಮುಖ ಮತ್ತು ಹಣೆಯ ಮೇಲೆ ಗಾಯಗಳೊಂದಿಗೆ ಮಗು ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು.
ಇದೇ ವೇಳೆ ಹಲವು ಕಿ.ಮೀ ಜೀಪ್ ನಲ್ಲಿ ಸಾಗಿ ನಿದ್ದೆಯಿಂದ ಎಚ್ಚೆತ್ತ ತಾಯಿಗೆ ಮಗು ಕಾಣೆಯಾಗಿರುವುದು ನಾಪತ್ತೆಯಾಗಿರುವುದು ಗೊತ್ತಾಯಿತು. ತಕ್ಷಣ ಅವರು ವೆಲ್ಲತ್ತುವ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದರು. ಅಷ್ಟರಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿಗಳು ಸಮೀಪದ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಿದ್ದರು. ಹೀಗಾಗಿ ಹೆತ್ತವರ ಮಡಿಲಿಗೆ ಮಗು ಮತ್ತೆ ಸೇರಿತು.
ಇನ್ನು ಈ ಭಯನಕ ಚೆಕ್ ಪೋಸ್ಟ್ ಬಳಿ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.