ತೆಲಂಗಾಣ, ಸೆ.10(Daijiworld News/SS): ಗಂಡು ಮಗುವನ್ನು ಅಪೇಕ್ಷಿಸುತ್ತಿದ್ದ ಅಜ್ಜ, ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಹಸುಗೂಸನ್ನು ಕೊಲೆ ಮಾಡಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದ ಮಗುವಿನ ಸ್ವಂತ ಅಜ್ಜ ಮಗು ಹೆಣ್ಣೆಂದು ತಿಳಿದು ತೀರಾ ಅಸಮಾಧಾನಗೊಂಡಿದ್ದಾನೆ. ಬಳಿಕ ಭತ್ತದ ಧಾನ್ಯಗಳನ್ನು ಮಗುವಿನ ಬಾಯಿಗೆ ತುಂಬಿಸಿ ಮಗುವನ್ನು ಕೈಯಾರೆ ಕೊಂದಿದ್ದಾನೆ ಎಂದು ವರದಿಯಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ತಿರುಪತಿ ರೆಡ್ಡಿ, ಭೀಚ್ಯ ಎಂದು ಗುರುತಿಸಲ್ಪಟ್ಟ ಆರೋಪಿ ತನ್ನ ಮೊಮ್ಮಗಳನ್ನು ಕೊಂದು ಆಕೆಯ ಶವವನ್ನು ಹತ್ತಿರದ ಹೊಲದಲ್ಲಿ ಹೂಳಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 4 ರಂದು ಜನಿಸಿದ್ದ ಹೆಣ್ಣು ಮಗು ಹುಟ್ಟಿದಾಗ 2.4 ಕೆಜಿ ತೂಕವಿತ್ತು ಮತ್ತು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.