ನವದೆಹಲಿ, ಸೆ 11 (Daijiworld News/MSP): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನ "ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್" ಪಕ್ಷದ ಮಾಜಿ ಶಾಸಕ ಇದೀಗ ಭಾರತದ ರಾಜಕೀಯ ಆಶ್ರಯವನ್ನು ಕೋರಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸಿದ್ದು ರಾಜಕೀಯ ಆಶ್ರಯ ನೀಡಬೇಕು ಎಂದು ಕೋರಿಕೊಂಡಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ಥಾಪಿಸಿದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸದಸ್ಯರಾಗಿದ್ದ ಬಾಲ್ದೇವ್ ಕುಮಾರ್, ಪುಖ್ತುಂಖ್ವಾ ಅಸೆಂಬ್ಲಿಯ ಬರಿಕೋಟ್ ಕ್ಷೇತ್ರದ ಮಾಜಿ ಶಾಸಕರಾಗಿದ್ದರು. ಈ ಹಿಂದೆ ಕೊಲೆ ಆರೋಪದಲ್ಲಿ ಬಂಧಿಯಾಗಿದ್ದ ಬಾಲದೇವ್ ಅವರನ್ನು ಬಳಿಕ ಪಾಕ್ ಸರ್ಕಾರ ಆ ಬಳಿಕ ಬಿಡುಗಡೆಗೊಳಿಸಿತ್ತು.
ಕೊಲೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಲದೇವ್, " 2016ರಲ್ಲಿ ನನ್ನ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಸಂಸದನಾಗಿದ್ದವರನ್ನು ಕೊಲೆ ಮಾಡಲಾಗಿತ್ತು. ಆದರೆ, ಕೊಲೆ ಆರೋಪಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೊರಿಸಿತ್ತು. 2018ರಲ್ಲಿ ಖುಲಾಸೆಗೊಳಿಸಲಾಗಿತ್ತು.
ಪಾಕಿಸ್ತಾನ ಅಲ್ಪ ಸಂಖ್ಯಾತರಿಗೆ ರಕ್ಷಣೆಯಿಲ್ಲ. ಅಲ್ಲಿ ಹಿಂದೂ ಮತ್ತು ಸಿಖ್ ನಾಯಕರ ಹತ್ಯೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಪಾಕ್ ಗೆ ಮರಳಲು ಸಿದ್ಧವಿಲ್ಲ "ಹೀಗಾಗಿ ನಾನು ಭಾರತಲ್ಲೇ ಆಶ್ರಯ ಪಡೆಯುವ ಉದ್ದೇಶದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಬಲದೇವ್ ಪಂಜಾಬ್ನ ಖನ್ನಾ ಪಟ್ಟಣದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಒಂದು ತಿಂಗಳಿನಿಂದ ಪತ್ನಿ ಭಾವನಾ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.
ನಾನು ಸ್ಪಷ್ಟ ನಿರ್ಧಾರ ತೆಗೆದುಕೊಂಡ ಬಳಿಕ ಇಲ್ಲಿಗೆ ಬಂದಿದ್ದೇನೆ. ನನಗೆ ಆಶ್ರಯ ನೀಡುವಂತೆ ಮತ್ತು ನನಗೆ ಭದ್ರತೆ ನೀಡುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸುತ್ತಿದ್ದೇನೆ" ನನ್ನ ಸಹೋದರರು ಪಾಕಿಸ್ತಾನದಲ್ಲಿದ್ದು ಅನೇಕ ಸಿಖ್ ಮತ್ತು ಹಿಂದೂ ಕುಟುಂಬಗಳು ಭಾರತಕ್ಕೆ ವಲಸೆ ಬರಲು ಬಯಸಿದ್ದಾರೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಪ್ರಧಾನಿ ಹುದ್ದೆಗೇರುವ ಸಂದರ್ಭ ಬಹಳ ನಿರೀಕ್ಷೆಗಳಿತ್ತು. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಸಂಪೂರ್ಣ ಬದಲಾದರು ಎಂದು ದೂರಿದರು.