ನವದೆಹಲಿ, ಸೆ 11 (Daijiworld News/MSP): ನವದೆಹಲಿಯ ನಿವಾಸದಲ್ಲಿ 8.60 ಕೋಟಿಯಷ್ಟು ದಾಖಲೆ ರಹಿತ ಹಣ ಪತ್ತೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ.
ಈ ನಡುವೆ ಡಿ. ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಗೂ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿದೆ. ಸೆಪ್ಟೆಂಬರ್ 12 ರಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗುವಂತೆ ಐಶ್ವರ್ಯಗೆ ಸಮನ್ಸ್ ಜಾರಿ ಮಾಡಿದೆ. ಡಿಕೆ ಶಿವಕುಮಾರ್ ಅವರ ಕಸ್ಟಡಿಯ ಅವಧಿ ಸೆ. 13 ರಂದು ಮುಕ್ತಾಯವಾಗಲಿದೆ. ತನಿಖೆ ವೇಳೆ ಆರೋಪಿಗಳ ಹೇಳಿಕೆ ಆಧಾರದ ಮೇಲೆ ಹಾಗೂ ಐಶ್ವರ್ಯ ಹೆಸರಿನಲ್ಲಿ ಶಿವಕುಮಾರ್ ಹೂಡಿಕೆ ಮಾಡಿರುವ ಆರೋಪದಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ.
ಇದರೊಂದಿಗೆ ಡಿಕೆಶಿ ಪುತ್ರಿ ಐಶ್ವರ್ಯ ಕೆಫೆ ಕಾಫಿ ಡೇಯ ಅಂದಿನ ಮಾಲೀಕ ದಿವಂಗತ ಸಿದ್ದಾರ್ಥ್ ಅವರಿಂದ 20 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಐಶ್ವರ್ಯ ಅವರ ಹೆಸರಿನಲ್ಲಿ ಸೋಲ್ ಅಂಡ್ ಸೇಲ್ಸ್ ನಲ್ಲಿ 78 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ನ್ಯಾಷನಲ್ ಗ್ಲೋಬಲ್ ಕಾಲೇಜಿನಲ್ಲಿ ಐಶ್ವರ್ಯಾ ಟ್ರಸ್ಟಿಯಾಗಿದ್ದಾರೆ.