ನವದೆಹಲಿ/ರಾಂಚಿ, ಆ. 08 (DaijiworldNews/AK): ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಜಾರ್ಖಂಡ್ನ ಜೆಪಿಎಸ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

2025ರ ಸಂಯೋಜಿತ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಹರಿಶರಣ್ ದೇವಗನ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ಏಪ್ರಿಲ್ 19ರಂದು ನಡೆದ ಜೆಪಿಎಸ್ಸಿ CCS Prelims-2025 ಪರೀಕ್ಷೆಯನ್ನು ರದ್ದುಗೊಳಿಸಿ, ಹೊಸದಾಗಿ ಪರೀಕ್ಷೆ ನಡೆಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅಕ್ರಮಗಳ ಬಗ್ಗೆ ಸಿಬಿಐನಿಂದ ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಕಾಲಮಿತಿಯ ತನಿಖೆ ನಡೆಸಬೇಕು ಎಂಬುದು ಅರ್ಜಿದಾರರ ಪ್ರಮುಖ ಬೇಡಿಕೆಯಾಗಿದೆ.
ಪರೀಕ್ಷೆಯಲ್ಲಿ ನಿಜವಾಗಿಯೂ ಅಕ್ರಮ ನಡೆದಿದೆಯೇ ಎಂಬುದನ್ನ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಸಮಿತಿ ರಚಿಸುವಂತೆಯೂ ಮನವಿ ಮಾಡಲಾಗಿದೆ.
ಈ ಸಮಿತಿಯಲ್ಲಿ ವಿಧಿವಿಜ್ಞಾನ, ಐಟಿ, ಸೈಬರ್ ಭದ್ರತೆ, ಪರೀಕ್ಷಾ ಭದ್ರತೆ, OMR ಮೌಲ್ಯಮಾಪನ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರನ್ನು ಸೇರಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, OMR ಸ್ಕ್ಯಾನಿಂಗ್, ಕೋಡಿಂಗ್, ಮೌಲ್ಯಮಾಪನ ಮತ್ತು ಫಲಿತಾಂಶ ಸಿದ್ಧಪಡಿಸುವ ಪ್ರಕ್ರಿಯೆಯನ್ನೂ ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ಕೋರಲಾಗಿದೆ.
ಪರೀಕ್ಷೆಗೆ ಸಂಬಂಧಿಸಿದ ಯಾವುದೇ ದಾಖಲೆ ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಮೂಲ OMR ಶೀಟ್ಗಳು, ಪ್ರಶ್ನೆಪತ್ರಿಕೆ, ಕೀ ಉತ್ತರ, ಹಾಜರಾತಿ ದಾಖಲೆ, ಬಯೋಮೆಟ್ರಿಕ್ ಮಾಹಿತಿ, ಪರೀಕ್ಷಾ ಕೇಂದ್ರಗಳ CCTV ದೃಶ್ಯಗಳು, ಸ್ಕ್ಯಾನಿಂಗ್ ಮತ್ತು ಮೌಲ್ಯಮಾಪನ ದಾಖಲೆ ಸೇರಿದಂತೆ ಎಲ್ಲಾ ಭೌತಿಕ ಹಾಗೂ ಟೆಕ್ನಿಕಲ್ ದಾಖಲೆಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಲಾಗಿದೆ.