ಬೆಂಗಳೂರು, ಆ. 10 (DaijiworldNews/AK): ನಕಲಿ ಗಾಂಧಿಗಳಿಗೆ ಬಿಜೆಪಿ ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ವಿಧಾನ ಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.

ʼಹರ್ ಘರ್ ತಿರಂಗಾʼ ಅಭಿಯಾನದ ಅಂಗವಾಗಿ ನಗರದ ಕೆ.ಸಿ. ಜನರಲ್ ಆಸ್ಪತ್ರೆಯ ಮುಂಭಾಗದ ಸರಕಾರಿ ಶಾಲೆ ಬಳಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ತ್ರಿವರ್ಣ ಧ್ವಜ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಿರುವ ಕಾಂಗ್ರೆಸ್ ನಕಲಿ ಗಾಂಧಿಗಳದ್ದು. ಒರಿಜಿನಲ್ ಗಾಂಧಿಗಳು ಎಂದೋ ಕಾಣೆಯಾಗಿದ್ದಾರೆ. ಒಂದೇ ಮನೆಯ ಡೂಪ್ಲಿಕೇಟ್ ಗಾಂಧಿಗಳು ಈಗ ಉಳಿದಿದ್ದಾರೆ. ಇವರು ಬಿಜೆಪಿ ಟೀಕಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಕಾಂಗ್ರೆಸ್ನವರು ಟೀಕೆ ಮಾಡುತ್ತಾರೆ. ಆದರೆ ಈಗ ಟೀಕೆ ಮಾಡುವವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಲ್ಲ. ಆಗಿನ ಕಾಂಗ್ರೆಸ್ ಬೇರೆ ಈಗಿನದ್ದು ಬೇರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಎಂದೋ ಹೊರಟು ಹೋಗಿದೆ ಎಂದು ಹೇಳಿದರು.
ಹಳೆಯ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಅಂತ ಮಹಾತ್ಮ ಗಾಂಧಿ ಅವರು ಅಂದೇ ಹೇಳಿದ್ದರು. ಆದರೆ ಹಾಗೆ ಮಾಡಲಿಲ್ಲ. ಇಂತಹವರೆಲ್ಲ ಸೇರಿಕೊಂಡು ಬಿಜೆಪಿ ಟೀಕೆ ಮಾಡುತ್ತಿದ್ದಾರೆ ಎಂದು ನುಡಿದರು. ಹರ್ಘರ್ ತಿರಂಗಾ ಅಭಿಯಾನದಲ್ಲಿ ನಾಗರಿಕರು ಸಕ್ರಿಯವಾಗಿ, ಉತ್ಸಾಹದಿಂದ ಭಾಗವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
ನಾವೆಲ್ಲ ಸೇರಿ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ. ಇದರ ಅಂಗವಾಗಿ ಇಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮನೆಮನೆಗೆ ತಿರಂಗವನ್ನು ಕೊಂಡೊಯ್ಯಯವ ಕೆಲಸವನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದು ಹೇಳಿದರು.
ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಇದಕ್ಕೆ ಪ್ರತಿಯಾಗಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರತ್ತ ಚಪ್ಪಲಿ ಹಾಗೂ ಬಾಟಲಿಗಳನ್ನು ಎಸೆದರು. ವಿದ್ಯಾರ್ಥಿಗಳು ಮುನ್ನುಗ್ಗುವುದನ್ನು ತಡೆಯಲು ಪೊಲೀಸರು ನೀರಿನ ಕ್ಯಾನಾನ್ಗಳನ್ನು ಬಳಸಿ, ಗುಂಪು ಚದುರಿಸಲು ಯತ್ನಿಸುತ್ತಿದ್ಧಾರೆ. ಬೃಹತ್ ವಾಟರ್ ಗನ್ಗಳಿಂದ ವೇಗವಾಗಿ ರಾಚುತ್ತಿರುವ ನೀರಿನ ಮಧ್ಯದಲ್ಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.