ಮುಂಬೈ, ಆ. 13 (DaijiworldNews/AK): ಶಿರೋಮಣಿ ಅಕಾಲಿ ದಳ ಮುಖ್ಯಸ್ಥಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಗುರುವಾರ ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಗುರುದ್ವಾರದಲ್ಲಿ ದಾಳಿ ನಡೆದಿದೆ.

ತಮ್ಮ ಪತ್ನಿ ಮತ್ತು ಎಸ್ಎಡಿ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರೊಂದಿಗೆ ಗುರುದ್ವಾರಕ್ಕೆ ಭೇಟಿ ನೀಡುತ್ತಿದ್ದ ಬಾದಲ್ ಅವರ ಮೇಲೆ ಓರ್ವ ನಿಹಾಂಗ್ ಸಿಖ್ ಕತ್ತಿಯಿಂದ ಹಲ್ಲೆ ನಡೆಸಿದ ನಂತರ ಅವರ ತೋಳು ಮತ್ತು ಭುಜಕ್ಕೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಬಾದಲ್ ಅವರ ಅಂಗ ರಕ್ಷಕ ಪಡೆಯ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಗಾಯಗೊಂಡಿದ್ದಾರೆ. ದಾಳಿಯಿಂದ ಗಾಯಗೊಂಡಿರುವ ಬಾದಲ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಬಾದಲ್ ಅವರು ತಖ್ತ್ ಸಚ್ಖಂಡ್ ಶ್ರೀ ಹಜುರ್ ಅಬ್ಚಲ್ನಗರ ಸಾಹಿಬ್ ಗುರುದ್ವಾರ ಮಂಡಳಿಗೆ ಭೇಟಿ ನೀಡಲು ನಾಂದೇಡ್ನಲ್ಲಿದ್ದಾಗ ಈ ದಾಳಿ ನಡೆದಿದೆ.