ಬೆಂಗಳೂರು, ಆ. 13 (DaijiworldNews/ AK): ನಟಿ ರನ್ಯಾ ರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ದಿನಕ್ಕೊಂದುತಿರುವು ಪಡೆದುಕೊಳ್ಳುತ್ತಿದೆ.

ಡಿಆರ್ಐ ಅಧಿಕಾರಿಗಳ ಶೋಕಾಸ್ ನೋಟಿಸ್ಗೆ ಬೆದರಿದ ರನ್ಯಾ ರಾವ್ ಗೆಳೆಯನಿಂದಲೇ ಬಿಗ್ ಶಾಕ್ ಎದುರಾಗಿದೆ. ನಾನು ರನ್ಯಾ ರಾವ್ಗೆ ಚಿನ್ನದ ಬಿಸ್ಕೆಟ್ ನೀಡಿದ್ದು ನಿಜ. ಆದರೆ ನಾನು ಚಿನ್ನದ ಬಿಸ್ಕೆಟ್ ನೀಡಿದ್ದು ದುಬೈನಲ್ಲಿ. ಹೀಗಾಗಿ ದುಬೈ ಕಾನೂನು ನನಗೆ ಅನ್ವಯ ಆಗಬೇಕು, ಭಾರತದ ಕಾನೂನಲ್ಲ ಮತ್ತು ನಾನು ಭಾರತದಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ ಹಾಗೂ ಚಿನ್ನ ಮಾರಾಟ ಮಾಡುವ ಪ್ರಯತ್ನವನ್ನು ಮಾಡಿಲ್ಲ ಎಂದು ಹೇಳಿದ್ದಾನೆ.
ನಾನು ಕೊಟ್ಟ ಚಿನ್ನವನ್ನು ರನ್ಯಾ ಕಳ್ಳಸಾಗಾಣಿಕೆ ಮಾಡಿದ್ದಾಳೆ ಮತ್ತು ಆಕೆಗೆ ಮಾತ್ರ ಭಾರತದ ಕಾನೂನು ಅನ್ವಯ ಆಗಬೇಕು. ಹೀಗಾಗಿ ನನ್ನನ್ನು ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾನೆ. ಈ ಮೂಲಕ ರನ್ಯಾ ರಾವ್ ಪ್ರಕರಣಕ್ಕೆ ಗೆಳೆಯನಿಂದಲೇ ಟ್ವಿಸ್ವ್ ಸಿಕ್ಕಿದೆ.