ನವದೆಹಲಿ, ಆ. 14 (DaijiworldNews/AA): ಹೈದರಾಬಾದ್ನ NALSAR ಯೂನಿವರ್ಸಿಟಿ ಆಫ್ ಲಾ 2026ರ ಬ್ಯಾಚ್ನ ಯಾವುದೇ ಪದವೀಧರರನ್ನು ನೋಂದಣಿ ಮಾಡಿಕೊಳ್ಳಬಾರದು ಎಂದು ಎಲ್ಲಾ ರಾಜ್ಯ ಬಾರ್ ಕೌನ್ಸಿಲ್ಗಳಿಗೆ ನಿರ್ದೇಶನ ನೀಡಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆದೇಶಕ್ಕೆ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯಕಾಂತ್ ಮಿಶ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ಮಾತುಕತೆ, ಮಧ್ಯಪ್ರವೇಶ ಮಾಡೋದಕ್ಕೆ ಅವರು ಯಾರು?. ಸುಪ್ರೀಂ ಕೋರ್ಟ್ ವಿದ್ಯಾರ್ಥಿಗಳಿಗೆ ಕಾನೂನುಬದ್ಧವಾಗಿ ಪ್ರತಿಭಟಿಸುವ ಹಕ್ಕು ನೀಡಿದೆ. ಬಾರ್ಕೌನ್ಸಿಲ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದಿತ್ತು" ಎಂದು ತಿಳಿಸಿದ್ದಾರೆ.
NALSAR ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು. ಇದಕ್ಕೂ ಬಿಸಿಐಗೂ ಯಾವುದೇ ಸಂಬಂಧವಿಲ್ಲ, ನಾವು ನಿಮ್ಮೊಂದಿಗಿದ್ದೇವೆ. ವಿದ್ಯಾರ್ಥಿಗಳು ನನಗೆ ಪತ್ರ ಬರೆದಿದ್ದಾರೆ. ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ಸಂವಾದ. ಅನಗತ್ಯವಾಗಿ ಸುತ್ತೋಲೆ ಹೊರಡಿಸಲು ಅವರು ಯಾರು? ನಾನು ಕಾಲೇಜಿನಲ್ಲಿದ್ದಾಗ, ನಾನು ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಕೆಲವೊಮ್ಮೆ ಅವರು ತಪ್ಪು ಹೇಳುತ್ತಿದ್ದರೂ, ಕಾನೂನುಬದ್ಧವಾಗಿ ಧ್ವನಿ ಎತ್ತುತ್ತಿದ್ದರೆ, ಅದನ್ನ ಗೌರವಿಸಬೇಕು" ಸಿಜೆಐ ಎಂದು ಹೇಳಿದ್ದಾರೆ.