ಬೆಂಗಳೂರು, ಆ. 14 (DaijiworldNews/AA): ಭಾರತವು ಸಹಿಷ್ಣು ದೇಶ, ದುರ್ಬಲವಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾನಾಡಿದ ಅವರು, "ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಶತ್ರು ಗುರಿಗಳನ್ನ ನಾಶಮಾಡುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು. ಜಗತ್ತಿಗೆ ಸಂದೇಶವು ತುಂಬಾ ಸ್ಪಷ್ಟವಾಗಿದೆ, ಭಾರತದ ಔದಾರ್ಯ ಅಥವಾ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ತಪ್ಪಾಗಿ ಭಾವಿಸಬಾರದು" ಎಂದಿದ್ದಾರೆ.
ಮುಂದುವರೆದು, "ಭಾರತ ಅಪಾಯಗಳನ್ನು ತೆಗೆದುಕೊಳ್ಳಬಹುದು. ಆದರೆ ನಮ್ಮ ಸಹಿಷ್ಣುತೆಯನ್ನು, ನಮ್ಮ ಔದಾರ್ಯವನ್ನು ದೌರ್ಬಲ್ಯವೆಂದು ತಪ್ಪಾಗಿ ಭಾವಿಸಬೇಡಿ. ಪರಿಣಾಮಗಳು ಏನೇ ಇರಲಿ, ಭಾರತ ತೀವ್ರವಾಗಿ ದಾಳಿ ಮಾಡಬಹುದು" ಎಂದು ಹೇಳಿದರು.